4 ಇನ್ನು ಮುಂದೆ ನಿನ್ನನ್ನ ತೊರೆದುಬಿಟ್ಟಿರೋ ಸ್ತ್ರೀ ಅಂತ ಕರಿಯಲ್ಲ,+
ಇನ್ನು ಮುಂದೆ ನಿನ್ನ ದೇಶವನ್ನ ನಿರ್ಜನ ಪ್ರದೇಶ ಅಂತ ಹೇಳಲಾಗಲ್ಲ.+
ಆದ್ರೆ ನಿನ್ನನ್ನ ‘ಅವಳಲ್ಲೇ ನನ್ನ ಸಂತೋಷ ಇದೆ’ ಅಂತ,+
ನಿನ್ನ ದೇಶವನ್ನ ‘ವಿವಾಹಿತೆ’ ಅಂತ ಕರೆಯಲಾಗುತ್ತೆ.
ಯಾಕಂದ್ರೆ ಯೆಹೋವ ನಿನ್ನಲ್ಲಿ ಸಂತೋಷವನ್ನ ಕಂಡ್ಕೊಳ್ತಾನೆ.
ನಿನ್ನ ದೇಶ ಮದುವೆ ಆಗಿರೋ ಸ್ತ್ರೀ ತರ ಇರುತ್ತೆ.