ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 7:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ,+ ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+

  • 2 ಸಮುವೇಲ 7:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ನಿನ್ನ ಮನೆ, ರಾಜ್ಯ ನಿನ್ನ ಮುಂದೆ ಶಾಶ್ವತವಾಗಿ ಭದ್ರವಾಗಿರುತ್ತೆ. ನಿನ್ನ ಆಡಳಿತ ಶಾಶ್ವತವಾಗಿ ಇರುತ್ತೆ.”’”+

  • 2 ಸಮುವೇಲ 23:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ದೇವರ ಮುಂದೆ ನನ್ನ ಕುಟುಂಬ ಅದೇ ರೀತಿ ಇದ್ಯಲ್ಲಾ?

      ಯಾಕಂದ್ರೆ ಆತನು ನನ್ನ ಜೊತೆ ಶಾಶ್ವತ ಒಪ್ಪಂದ ಮಾಡ್ಕೊಂಡಿದ್ದಾನೆ,+

      ಅದರ ಪ್ರತಿಯೊಂದು ವಿವರಗಳನ್ನ ಕೊಟ್ಟು, ಭದ್ರಪಡಿಸಿದ್ದಾನೆ.

      ಅದು ನನಗೆ ಸಂಪೂರ್ಣ ರಕ್ಷಣೆ, ಎಲ್ಲ ಸಂತೋಷ ಕೊಡುತ್ತೆ,

      ಈ ಕಾರಣಕ್ಕೇ ನನ್ನ ಕುಟುಂಬವನ್ನ ಹೆಚ್ಚಿಸ್ತಾ ಬಂದಿದ್ದಾನಲ್ವಾ?+

  • ಕೀರ್ತನೆ 89:28, 29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಅವನ ಮೇಲೆ ಶಾಶ್ವತ ಪ್ರೀತಿಯನ್ನ ನಾನು ಯಾವಾಗ್ಲೂ ತೋರಿಸ್ತೀನಿ,+

      ಅವನ ಜೊತೆ ಮಾಡ್ಕೊಂಡಿರೋ ನನ್ನ ಒಪ್ಪಂದ ಯಾವತ್ತೂ ಮುರಿದುಹೋಗಲ್ಲ.+

      29 ನಾನು ಅವನ ಸಂತತಿಯನ್ನ ಶಾಶ್ವತವಾಗಿ ಸ್ಥಿರಪಡಿಸ್ತೀನಿ,

      ಆಕಾಶ ಇರೋ ತನಕ ಅವನ ಸಿಂಹಾಸನ ಇರುತ್ತೆ.+

  • ಯೆರೆಮೀಯ 33:25, 26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 “ಯೆಹೋವ ಹೇಳೋದು ಏನಂದ್ರೆ ‘ಹಗಲು ರಾತ್ರಿಗಳ ವಿಷ್ಯದಲ್ಲಿ ನಾನು ಮಾಡಿರೋ ಒಪ್ಪಂದವಾಗಲಿ+ ಆಕಾಶ, ಭೂಮಿಗಾಗಿ ನಾನು ಇಟ್ಟಿರೋ ನಿಯಮಗಳಾಗಲಿ+ ಹೇಗೆ ಬದಲಾಗಲ್ವೋ 26 ಹಾಗೇ ನಾನು ಯಾಕೋಬನ, ನನ್ನ ಸೇವಕನಾದ ದಾವೀದನ ವಂಶದವರನ್ನ ಯಾವತ್ತೂ ತಿರಸ್ಕರಿಸಲ್ಲ ಅಂತ ಹೇಳಿದ ಮಾತು ಬದಲಾಗಲ್ಲ. ದಾವೀದನ ವಂಶದಿಂದ ಬರೋರು ಅಬ್ರಹಾಮ, ಇಸಾಕ, ಯಾಕೋಬನ ವಂಶದವರ ಮೇಲೆ ಸದಾಕಾಲ ರಾಜರಾಗಿ ಇರೋ ತರ ಮಾಡ್ತೀನಿ. ಯಾಕಂದ್ರೆ ಕೈದಿಗಳಾಗಿ ಹೋಗಿರೋ ಅವ್ರ ವಂಶದವರನ್ನ ನಾನು ಒಟ್ಟುಗೂಡಿಸಿ ವಾಪಸ್‌ ಕರ್ಕೊಂಡು ಬರ್ತಿನಿ.+ ಅವ್ರಿಗೆ ಕನಿಕರ ತೋರಿಸ್ತೀನಿ.’”+

  • ಅ. ಕಾರ್ಯ 13:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಯೇಸು ಸತ್ತಾಗ ದೇವರು ಆತನಿಗೆ ಮತ್ತೆ ಜೀವ ಕೊಟ್ಟನು. ಹೀಗೆ ಯೇಸುವನ್ನ ಇನ್ಯಾವತ್ತೂ ಕೊಳೆಯೋಕೆ ಬಿಟ್ಟಿಲ್ಲ ಅನ್ನೋದನ್ನ ಮುಂಚೆನೇ ಹೀಗೆ ಮಾತಿನ ಮೂಲಕ ಹೇಳಿದ್ದನು ‘ನಾನು ದಾವೀದನಿಗೆ ಮಾತು ಕೊಟ್ಟ ಹಾಗೆ ನಿಮಗೆ ಶಾಶ್ವತ ಪ್ರೀತಿಯನ್ನ ತೋರಿಸೇ ತೋರಿಸ್ತೀನಿ.’+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ