25 ಪ್ರತಿಯೊಂದು ಬೀದಿಯಲ್ಲಿ ಎಲ್ಲರಿಗೂ ಕಾಣೋ ಜಾಗದಲ್ಲಿ ನೀನು ಅವನ್ನ* ಕಟ್ಟಿದೆ. ದಾರಿಯಲ್ಲಿ ಹೋಗ್ತಾ ಬರ್ತಾ ಇರೋರಿಗೆಲ್ಲ ನಿನ್ನ ದೇಹವನ್ನ ಕೊಡೋ ಮೂಲಕ ನಿನ್ನ ಸೌಂದರ್ಯವನ್ನ ಅಸಹ್ಯವಾಗಿ ಮಾಡ್ಕೊಂಡೆ.+ ನೀನು ವೇಶ್ಯಾವಾಟಿಕೆಯನ್ನ ಇನ್ನೂ ಜಾಸ್ತಿ ಮಾಡಿದೆ.+
33 ಸಾಮಾನ್ಯವಾಗಿ ಎಲ್ಲ ವೇಶ್ಯೆಯರಿಗೆ ಜನ್ರು ಉಡುಗೊರೆ ಕೊಡ್ತಾರೆ,+ ಆದ್ರೆ ಕಾಮಾತುರದಿಂದ ನಿನ್ನ ಹತ್ರ ಬರೋರಿಗೆ ನೀನೇ ಉಡುಗೊರೆ ಕೊಟ್ಟಿದ್ದೀಯ.+ ನಿನ್ನ ಜೊತೆ ಸಂಬಂಧ ಇಟ್ಕೊಳ್ಳೋಕೆ ಎಲ್ಲ ಕಡೆ ಇರೋರನ್ನ ಲಂಚಕೊಟ್ಟು ನಿನ್ನ ಹತ್ರ ಕರೆಸ್ಕೊಳ್ತೀಯ.+
18 ಅವಳು ಭಂಡತನದಿಂದ ವೇಶ್ಯಾವಾಟಿಕೆ ಮಾಡ್ತಾ ಹೋಗಿದ್ರಿಂದ ಮತ್ತು ತನ್ನ ಬೆತ್ತಲೆತನವನ್ನ ಬೇರೆಯವ್ರಿಗೆ ತೋರಿಸಿದ್ರಿಂದ+ ನನಗೆ ಅವಳಂದ್ರೆ ಅಸಹ್ಯ ಅನಿಸಿತು. ಹಾಗಾಗಿ ಅವಳ ಅಕ್ಕನ ಮೇಲೆ ನನಗೆ ಹೇಸಿಗೆ ಹುಟ್ಟಿದಾಗ ನಾನು ಅವಳನ್ನ ಹೇಗೆ ತಳ್ಳಿಬಿಟ್ಟೆನೋ ಅದೇ ತರ ಇವಳನ್ನೂ ತಳ್ಳಿಬಿಟ್ಟೆ.+