-
ಯೆಶಾಯ 56:6, 7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯೆಹೋವನನ್ನ ಆರಾಧಿಸ್ತಾ ಆತನ ಸೇವೆಮಾಡೋಕೆ,
ಯೆಹೋವನ ಹೆಸ್ರನ್ನ ಪ್ರೀತಿಸೋಕೆ,+
ಆತನ ಸೇವಕರಾಗೋಕೆ ಮುಂದೆ ಬರೋ ವಿದೇಶಿಯರನ್ನ ಸಹ,
ಅಂದ್ರೆ ಸಬ್ಬತ್ತನ್ನ ಆಚರಿಸ್ತಾ ಅದನ್ನ ಅಪವಿತ್ರ ಮಾಡದೆ,
ನನ್ನ ಒಪ್ಪಂದಕ್ಕೆ ಯಾವಾಗ್ಲೂ ಬದ್ಧರಾಗಿರೋ ವಿದೇಶಿಯರನ್ನ ಸಹ,
7 ನಾನು ನನ್ನ ಪವಿತ್ರ ಬೆಟ್ಟದ ಹತ್ರ ಕರ್ಕೊಂಡು ಬರ್ತಿನಿ,+
ನನ್ನ ಪ್ರಾರ್ಥನಾಲಯದಲ್ಲಿ ಅವರು ಸಂತೋಷ ಪಡೋ ತರ ಮಾಡ್ತೀನಿ.
ನನ್ನ ಯಜ್ಞವೇದಿ ಮೇಲೆ ಅವರು ಅರ್ಪಿಸೋ ಸರ್ವಾಂಗಹೋಮ ಬಲಿಗಳನ್ನ ಮತ್ತು ಬೇರೆ ಬಲಿಗಳನ್ನ ನಾನು ಸ್ವೀಕರಿಸ್ತೀನಿ.
ಯಾಕಂದ್ರೆ ನನ್ನ ಆಲಯಕ್ಕೆ ಎಲ್ಲ ಜನ್ರಿಗಾಗಿ ಇರೋ ಪ್ರಾರ್ಥನಾ ಮಂದಿರ ಅನ್ನೋ ಹೆಸ್ರು ಬರುತ್ತೆ.”+
-
-
ಜೆಕರ್ಯ 8:22, 23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಆಗ ಎಷ್ಟೋ ಜನಾಂಗಗಳು ಮತ್ತು ಬಲಿಷ್ಠ ದೇಶಗಳು ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ,+ ಯೆಹೋವನ ಆಶೀರ್ವಾದ ಪಡಿಯೋಕೆ ಯೆರೂಸಲೇಮಿಗೆ ಬರುತ್ತೆ.’
23 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಆ ದಿನಗಳಲ್ಲಿ ಎಲ್ಲ ಭಾಷೆಗಳಿಂದ ಎಲ್ಲ ದೇಶಗಳಿಂದ+ ಬಂದಂಥ 10 ಜನ ಒಬ್ಬ ಯೆಹೂದ್ಯನ ಬಟ್ಟೆಯ ತುದಿಯನ್ನ ಗಟ್ಟಿಯಾಗಿ ಹಿಡ್ಕೊಂಡು “ದೇವರು ನಿಮ್ಮ ಜೊತೆ ಇದ್ದಾನೆ ಅಂತ ನಾವು ಕೇಳಿಸ್ಕೊಂಡಿದ್ದೀವಿ.+ ಹಾಗಾಗಿ ನಾವೂ ನಿಮ್ಮ ಜೊತೆ ಬರ್ತಿವಿ”+ ಅಂತಾರೆ.’”
-