-
ದಾನಿಯೇಲ 5:22, 23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಆದ್ರೆ ಅವನ ಮಗನಾಗಿರೋ ಬೇಲ್ಶಚ್ಚರನೇ, ಇದೆಲ್ಲ ನಿನಗೆ ಗೊತ್ತಿದ್ರೂ ನೀನು ತಗ್ಗಿಬಗ್ಗಿ ನಡಿಲಿಲ್ಲ. 23 ಬದಲಿಗೆ ದೇವರ ಮುಂದೆ ಸೊಕ್ಕಿಂದ ನಡ್ಕೊಂಡೆ.+ ಆತನ ಆಲಯದ ಪಾತ್ರೆಗಳನ್ನ ತರಿಸಿ+ ಅದ್ರಲ್ಲಿ ನೀನು, ನಿನ್ನ ಪ್ರಧಾನರು, ನಿನ್ನ ಉಪಪತ್ನಿಯರು, ನಿನ್ನ ಬೇರೆ ಪತ್ನಿಯರು ದ್ರಾಕ್ಷಾಮದ್ಯ ಕುಡಿದ್ರಿ. ಯಾವುದನ್ನೂ ನೋಡಕ್ಕಾಗದ, ಕೇಳಿಸ್ಕೊಳ್ಳೋಕೆ ಆಗದ, ಏನೂ ಗೊತ್ತಾಗದ ಬೆಳ್ಳಿ, ಚಿನ್ನ, ತಾಮ್ರ, ಕಬ್ಬಿಣ, ಮರ, ಕಲ್ಲಿನ ದೇವರುಗಳನ್ನ ಹೊಗಳ್ತಾ ಇದ್ದೆ.+ ಆದ್ರೆ ಯಾರ ಕೈಯಲ್ಲಿ ನಿನ್ನ ಉಸಿರು, ನಿನ್ನ ಜೀವ ಇದ್ಯೋ ಆ ದೇವರಿಗೆ+ ನೀನು ಗೌರವ ಕೊಡಲಿಲ್ಲ.
-