5 ಯೆಹೂದ ಮತ್ತು ಯೆರೂಸಲೇಮಿನ ಜನ್ರು ಯೆಹೋವನ ಆಲಯದಲ್ಲಿ ಹೊಸ ಅಂಗಳದ ಮುಂದೆ ಸೇರಿಬಂದಿದ್ರು. ಆಗ ಯೆಹೋಷಾಫಾಟ ಅವ್ರ ಮುಂದೆ ನಿಂತು, 6 ಹೀಗಂದ
“ನಮ್ಮ ಪೂರ್ವಜರ ದೇವರಾಗಿರೋ ಯೆಹೋವನೇ, ಸ್ವರ್ಗದಲ್ಲಿರೋ ದೇವರು ನೀನೇ!+ ದೇಶದ ಎಲ್ಲ ರಾಜ್ಯಗಳ ಮೇಲೆ ನಿನಗೆ ಅಧಿಕಾರ ಇದೆ.+ ನಿನ್ನ ಕೈಯಲ್ಲಿ ಶಕ್ತಿ ಮತ್ತು ಬಲ ಇದೆ. ಹಾಗಾಗಿ ನಿನಗೆ ವಿರುದ್ಧವಾಗಿ ಯಾರೂ ನಿಲ್ಲಕ್ಕಾಗಲ್ಲ.+