46 ‘ಮೋವಾಬೇ, ನಿನ್ನ ಗತಿಯನ್ನ ಏನಂತ ಹೇಳಲಿ!
ಕೆಮೋಷನ+ ಜನ್ರು ನಾಶ ಆಗಿದ್ದಾರೆ.
ನಿನ್ನ ಗಂಡುಮಕ್ಕಳನ್ನ ಹಿಡ್ಕೊಂಡು ಹೋಗಿದ್ದಾರೆ,
ನಿನ್ನ ಹೆಣ್ಣುಮಕ್ಕಳು ಕೈದಿಗಳಾಗಿ ಹೋಗಿದ್ದಾರೆ.+
47 ಆದ್ರೆ ಕೈದಿಗಳಾಗಿ ಹೋಗಿರೋ ಮೋವಾಬಿನ ಜನ್ರನ್ನ ನಾನು ಕೊನೆ ದಿನಗಳಲ್ಲಿ ಒಟ್ಟುಗೂಡಿಸ್ತೀನಿ’ ಅಂತ ಯೆಹೋವ ಹೇಳ್ತಾನೆ.
‘ಮೋವಾಬಿನ ತೀರ್ಪಿನ ಸಂದೇಶ ಇಲ್ಲಿಗೆ ಮುಗೀತು.’”+