8 ಆಹಾಜ ಯೆಹೋವನ ಆಲಯದಲ್ಲಿದ್ದ, ಅರಮನೆಯ ಖಜಾನೆಗಳಲ್ಲಿದ್ದ ಎಲ್ಲ ಬೆಳ್ಳಿಬಂಗಾರವನ್ನ ತಗೊಂಡು ಅಶ್ಶೂರ್ಯರ ರಾಜನಿಗೆ ಲಂಚವಾಗಿ ಕಳಿಸ್ಕೊಟ್ಟ.+ 9 ಅಶ್ಶೂರ್ಯರ ರಾಜ ಅವನ ಬಿನ್ನಹವನ್ನ ಕೇಳಿ ದಮಸ್ಕಕ್ಕೆ ಹೋಗಿ ಅದನ್ನ ವಶ ಮಾಡ್ಕೊಂಡ. ಅಲ್ಲಿನ ಜನ್ರನ್ನ ಕೀರ್+ ಅನ್ನೋ ಸ್ಥಳಕ್ಕೆ ಕೈದಿಗಳಾಗಿ ಕರ್ಕೊಂಡು ಹೋದ. ರೆಚೀನನನ್ನ ಕೊಂದುಹಾಕಿದ.+