2 “ಮನುಷ್ಯಕುಮಾರನೇ, ನೀನು ತೂರಿನ ಮುಖಂಡನಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ:
“ನೀನು ಜಂಬದಿಂದ ಉಬ್ಬಿಕೊಂಡಿರೋದ್ರಿಂದ,+ ‘ನಾನೇ ದೇವರು.
ನಾನು ಸಮುದ್ರದ ಮಧ್ಯ ದೇವರ ಸಿಂಹಾಸನದಲ್ಲಿ ಕೂತಿದ್ದೀನಿ’+ ಅಂತ ಹೇಳ್ತಿದ್ದೀಯ.
ನೀನೇ ದೇವರು ಅಂತ ಮನಸ್ಸಲ್ಲಿ ಅಂದ್ಕೊಳ್ತೀಯ,
ಆದ್ರೆ ನೀನು ದೇವರಲ್ಲ, ಒಬ್ಬ ಮನುಷ್ಯ ಅಷ್ಟೆ.