8 ನಿನ್ನ ಊರಲ್ಲಿರೋ ಜನ್ರನ್ನ ಅವನು ಕತ್ತಿಯಿಂದ ಸಾಯಿಸ್ತಾನೆ. ಅವನು ನಿನ್ನ ವಿರುದ್ಧ ದಾಳಿ ಮಾಡೋಕೆ ಇಳಿಜಾರು ದಿಬ್ಬವನ್ನೂ ಗೋಡೆಯನ್ನೂ ಕಟ್ತಾನೆ. ಅಷ್ಟೇ ಅಲ್ಲ, ಅವನು ದೊಡ್ಡ ಗುರಾಣಿ ಮಾಡ್ತಾನೆ. 9 ಅವನು ಗೋಡೆ ಒಡಿಯೋ ಯಂತ್ರದಿಂದ ನಿನ್ನ ಗೋಡೆಗಳನ್ನ ಗುದ್ದಿ ಗುದ್ದಿ ಒಡೆದು ಹಾಕ್ತಾನೆ, ಕೊಡಲಿಗಳಿಂದ ನಿನ್ನ ಗೋಪುರಗಳನ್ನ ಬೀಳಿಸ್ತಾನೆ.