49 ಭೂಮಿಯ ಯಾವುದೋ ಮೂಲೆಯಲ್ಲಿರೋ ಒಂದು ಜನಾಂಗ ನಿಮ್ಮ ವಿರುದ್ಧ ಬರೋ ಹಾಗೆ ಯೆಹೋವ ಮಾಡ್ತಾನೆ.+ ಹದ್ದು ತನ್ನ ಬೇಟೆ ಮೇಲೆ ತಟ್ಟನೆ ಬೀಳೋ ತರ+ ಆ ಜನಾಂಗ ನಿಮ್ಮ ಮೇಲೆ ದಿಢೀರಂತ ದಾಳಿ ಮಾಡುತ್ತೆ. ಅವರ ಭಾಷೆ ನಿಮಗೆ ಅರ್ಥ ಆಗಲ್ಲ.+50 ಕ್ರೂರಿಗಳಾದ ಆ ಜನ್ರು ವಯಸ್ಸಾದವರ ಮೇಲೆ, ಮಕ್ಕಳ ಮೇಲೆ ದಯೆ ತೋರಿಸಲ್ಲ.+
21 ನಿಯಮ ಪುಸ್ತಕದಲ್ಲಿ ಏನು ಹೇಳಿದೆ ಅಂದ್ರೆ “‘ನಾನು ಈ ಜನ್ರ ಜೊತೆ ವಿದೇಶಿಯರ ಮತ್ತು ಅಪರಿಚಿತರ ಭಾಷೆಗಳಲ್ಲಿ ಮಾತಾಡ್ತೀನಿ. ಆದ್ರೂ ಅವರು ನನ್ನ ಮಾತು ಕೇಳಲ್ಲ’ ಅಂತ ಯೆಹೋವ* ಹೇಳ್ತಾನೆ.”+