ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 28:49, 50
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 49 ಭೂಮಿಯ ಯಾವುದೋ ಮೂಲೆಯಲ್ಲಿರೋ ಒಂದು ಜನಾಂಗ ನಿಮ್ಮ ವಿರುದ್ಧ ಬರೋ ಹಾಗೆ ಯೆಹೋವ ಮಾಡ್ತಾನೆ.+ ಹದ್ದು ತನ್ನ ಬೇಟೆ ಮೇಲೆ ತಟ್ಟನೆ ಬೀಳೋ ತರ+ ಆ ಜನಾಂಗ ನಿಮ್ಮ ಮೇಲೆ ದಿಢೀರಂತ ದಾಳಿ ಮಾಡುತ್ತೆ. ಅವರ ಭಾಷೆ ನಿಮಗೆ ಅರ್ಥ ಆಗಲ್ಲ.+ 50 ಕ್ರೂರಿಗಳಾದ ಆ ಜನ್ರು ವಯಸ್ಸಾದವರ ಮೇಲೆ, ಮಕ್ಕಳ ಮೇಲೆ ದಯೆ ತೋರಿಸಲ್ಲ.+

  • ಯೆರೆಮೀಯ 4:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನೋಡಿ! ಶತ್ರು ಮಳೆ ಮೋಡಗಳ ಹಾಗೆ ಬರ್ತಾನೆ,

      ಅವನ ರಥಗಳು ಬಿರುಗಾಳಿ ತರ ಬರುತ್ತೆ.+

      ಅವನ ಕುದುರೆಗಳು ಹದ್ದುಗಳಿಗಿಂತ ವೇಗವಾಗಿ ಬರುತ್ತೆ.+

      ಅಯ್ಯೋ, ನಮಗೆ ಎಂಥ ಗತಿ ಬಂತು! ನಾವು ನಾಶ ಆಗಿಬಿಟ್ವಿ!

  • ಪ್ರಲಾಪ 4:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ನಮ್ಮನ್ನ ಬೆನ್ನಟ್ಟಿದವರು ಆಕಾಶದಲ್ಲಿ ಹಾರೋ ಹದ್ದುಗಳಿಗಿಂತ ವೇಗವಾಗಿ ಅಟ್ಟಿಸ್ಕೊಂಡು ಬಂದಿದ್ರು.+

      ಬೆಟ್ಟಗಳ ಮೇಲೆ ಅವರು ನಮ್ಮನ್ನ ಓಡಿಸ್ಕೊಂಡು ಹೋದ್ರು, ಕಾಡಲ್ಲಿ ನಮಗಾಗಿ ಹೊಂಚುಹಾಕಿ ಹಿಡಿದ್ರು.

  • ಹಬಕ್ಕೂಕ 1:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ನೋಡಿ, ನಾನು ಕಸ್ದೀಯರನ್ನ ಎಬ್ಬಿಸ್ತೀನಿ,+

      ಅವರು ಕ್ರೂರಿಗಳು, ಉಗ್ರರು.

      ಅವರು ಬೇರೆಯವರ ಮನೆಗಳನ್ನ ವಶ ಮಾಡ್ಕೊಳ್ಳೋಕೆ

      ವಿಶಾಲ ಭೂಮಿಯಲ್ಲೆಲ್ಲ ಓಡಾಡ್ತಾರೆ.+

  • ಹಬಕ್ಕೂಕ 1:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಅವ್ರ ಕುದುರೆಗಳು ಚಿರತೆಗಳಿಗಿಂತ ವೇಗ,

      ರಾತ್ರಿ ಹೊತ್ತಲ್ಲಿ ತಿರುಗಾಡೋ ತೋಳಗಳಿಗಿಂತ ಕ್ರೂರ.+

      ಅವ್ರ ಯುದ್ಧ ಕುದುರೆಗಳು ಓಡೋಡಿ ಮುಂದೆ ಬರುತ್ತೆ.

      ಅವರ ಕುದುರೆಗಳು ತುಂಬ ದೂರದಿಂದ ಬರುತ್ತೆ.

      ಬೇಟೆಯನ್ನ ಹಿಡಿಯೋ ಹದ್ದು ಆತುರದಿಂದ ಬರೋ ಹಾಗೆ ಬರುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ