ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 16:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಆ ಸಮಯದಲ್ಲಿ ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ದಾಸದಾಸಿಯರು, ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು, ವಿದೇಶಿಯರು, ಅನಾಥ ಮಕ್ಕಳು, ವಿಧವೆಯರು ಎಲ್ರೂ ಸಂತೋಷ ಸಂಭ್ರಮದಿಂದ ಇರಬೇಕು.+

  • ಕೀರ್ತನೆ 42:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ನಾನು ಇದನ್ನೆಲ್ಲ ನೆನಪಿಸ್ಕೊತೀನಿ, ನಾನು ನನ್ನ ಹೃದಯದ ಭಾವನೆಗಳನ್ನ ನಿನ್ನ ಹತ್ರ ತೋಡ್ಕೊತೀನಿ,

      ಒಂದು ಕಾಲದಲ್ಲಿ ನಾನು ಜನ್ರ ಗುಂಪಲ್ಲಿ ನಡೀತಿದ್ದೆ,

      ಭಕ್ತಿಪೂರ್ವಕವಾಗಿ ಅವ್ರ ಮಧ್ಯ ನಡೀತಾ ದೇವರ ಆಲಯದ ಕಡೆ ಹೋಗ್ತಿದ್ದೆ.

      ಆ ಜನ್ರ ಗುಂಪು ದೇವ್ರಿಗೆ ಧನ್ಯವಾದ ಹೇಳ್ತಾ,

      ಜೈಕಾರ ಹಾಕ್ತಾ ಹಬ್ಬ ಆಚರಿಸ್ತಿತ್ತು.+

  • ಯೆರೆಮೀಯ 33:10, 11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 “ಯೆಹೋವ ಹೇಳೋದು ಏನಂದ್ರೆ ‘ಯೆಹೂದದ ಪಟ್ಟಣಗಳನ್ನ, ಯೆರೂಸಲೇಮಿನ ಬೀದಿಗಳನ್ನ ನೀವು ಬಂಜರುಭೂಮಿ, ಯಾರೂ ಇಲ್ಲದ ಜಾಗ, ಮನುಷ್ಯನಾಗಲಿ ಪ್ರಾಣಿಯಾಗಲಿ ಇಲ್ಲದೆ ಬಿಕೋ ಅಂತಿದೆ ಅಂತ ಹೇಳ್ತೀರ. ಆದ್ರೆ ಅಲ್ಲಿ 11 ಸಂತೋಷ ಸಂಭ್ರಮದ ಸದ್ದು+ ಮದುಮಗ ಮದುಮಗಳ ಸ್ವರ ಕೇಳಿಸುತ್ತೆ. ಅಲ್ಲದೆ “ಸೈನ್ಯಗಳ ದೇವರಾದ ಯೆಹೋವನಿಗೆ ಧನ್ಯವಾದ ಸಲ್ಲಿಸಿ. ಯಾಕಂದ್ರೆ ಯೆಹೋವ ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ!”+ ಅಂತ ಹೇಳ್ತಾರೆ.’

      ‘ಅವರು ಯೆಹೋವನ ಆಲಯದ ಒಳಗೆ ಕೃತಜ್ಞತಾ ಅರ್ಪಣೆಗಳನ್ನ ತರ್ತಾರೆ.+ ಯಾಕಂದ್ರೆ ಈ ದೇಶದಿಂದ ಕೈದಿಗಳಾಗಿ ಹೋದವ್ರನ್ನ ನಾನು ವಾಪಸ್‌ ಕರ್ಕೊಂಡು ಬರ್ತಿನಿ, ಅವ್ರನ್ನ ಮುಂಚಿನ ತರ ಮಾಡ್ತೀನಿ’ ಅಂತ ಯೆಹೋವ ಹೇಳ್ತಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ