24 ಹಾಗಾಗಿ ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಿದ್ದಾನೆ “ಚೀಯೋನಿನ ನಿವಾಸಿಗಳೇ, ನನ್ನ ಜನ್ರೇ, ಈಜಿಪ್ಟಿನ ತರ+ ನಿಮ್ಮನ್ನ ಕೋಲಿಂದ ಹೊಡಿಯೋ,+ ನಿಮ್ಮ ವಿರುದ್ಧ ಕೋಲನ್ನ ಎತ್ತೋ ಅಶ್ಶೂರ್ಯರಿಗೆ ಹೆದರಬೇಡಿ.
26 ಸೈನ್ಯಗಳ ದೇವರಾದ ಯೆಹೋವ ಓರೇಬ್ ಬಂಡೆ+ ಹತ್ರ ಮಿದ್ಯಾನ್ಯರನ್ನ ಸೋಲಿಸಿದಾಗ ಮಾಡಿದ ಹಾಗೇ ಅಶ್ಶೂರ್ಯರ ಮೇಲೆ ಕೊರಡೆಯನ್ನ ಬೀಸ್ತಾನೆ.+ ಆತನು ತನ್ನ ಕೋಲನ್ನ ಈಜಿಪ್ಟಿನ ವಿರುದ್ಧ ಎತ್ತಿದ ಹಾಗೆ ಸಮುದ್ರದ ಮೇಲೆ ಎತ್ತುತ್ತಾನೆ.+