-
ಯೆಶಾಯ 37:37, 38ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ಹಾಗಾಗಿ ಅಶ್ಶೂರ್ಯರ ರಾಜ ಸನ್ಹೇರೀಬ ಅಲ್ಲಿಂದ ನಿನೆವೆಗೆ+ ವಾಪಸ್ ಹೋಗಿ ಅಲ್ಲೇ ಇದ್ದ.+ 38 ಒಂದಿನ ಅವನು ದೇವಸ್ಥಾನಕ್ಕೆ ಹೋಗಿ ತನ್ನ ದೇವರಾದ ನಿಸ್ರೋಕನಿಗೆ ಅಡ್ಡಬಿದ್ದು ನಮಸ್ಕಾರ ಮಾಡ್ತಿದ್ದಾಗ ಅವನ ಮಕ್ಕಳಾದ ಅದ್ರಮ್ಮೆಲೆಕ ಮತ್ತು ಸರೆಚೆರ ಅವನನ್ನ ಕತ್ತಿಯಿಂದ ಸಾಯಿಸಿದ್ರು.+ ಆಮೇಲೆ ಅವರು ತಪ್ಪಿಸ್ಕೊಂಡು ಅರರಾಟ್+ ದೇಶಕ್ಕೆ ಓಡಿಹೋದ್ರು. ಸನ್ಹೇರೀಬನ ನಂತ್ರ ಅವನ ಮಗ ಏಸರ್-ಹದ್ದೋನ+ ರಾಜನಾದ.
-
-
ಯೆಹೆಜ್ಕೇಲ 32:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಅಶ್ಶೂರ ಅನ್ನೋ ಸ್ತ್ರೀ ತನ್ನ ಇಡೀ ಸಮೂಹದ ಜೊತೆ ಅಲ್ಲಿದ್ದಾಳೆ. ಅಶ್ಶೂರ್ಯರ ಸಮಾಧಿಗಳು ಅವ್ರ ರಾಜನ ಸುತ್ತ ಇವೆ. ಅವ್ರೆಲ್ಲ ಕತ್ತಿಯಿಂದ ಸತ್ತವರು.+
-