-
ಯೆರೆಮೀಯ 5:26-28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ನನ್ನ ಜನ್ರಲ್ಲಿ ಕೆಟ್ಟವರು ಇದ್ದಾರೆ.
ಹಕ್ಕಿಗಳನ್ನ ಹಿಡಿಯೋರು ಹೊಂಚು ಹಾಕುವಾಗ ಇಣಿಕಿ ನೋಡೋ ತರ ಅವರು ಇಣಿಕಿ ನೋಡ್ತಾ ಇರ್ತಾರೆ.
ಅವರು ಜೀವ ತೆಗಿಯೋ ಉರ್ಲು ಇಟ್ಟಿದ್ದಾರೆ.
ಅವರು ಹಿಡಿಯೋದು ಮನುಷ್ಯರನ್ನೇ!
27 ಪಂಜರದಲ್ಲಿ ಪಕ್ಷಿಗಳು ತುಂಬಿರೋ ಹಾಗೆ,
ಮೋಸದಿಂದ ಪಡೆದ ವಸ್ತುಗಳು ಅವ್ರ ಮನೆಯಲ್ಲಿ ತುಂಬಿದೆ.+
ಹೀಗೆ ಅವರು ಶ್ರೀಮಂತರಾಗಿ ಇದ್ದಾರೆ, ಬಲಶಾಲಿ ಆಗಿದ್ದಾರೆ.
28 ಅವರು ಚೆನ್ನಾಗಿ ಕೊಬ್ಬಿ ಪಳಪಳ ಹೊಳಿತಾರೆ.
ಲೆಕ್ಕ ಇಲ್ಲದಷ್ಟು ಕೆಟ್ಟತನ ಮಾಡ್ತಾರೆ.
-
-
ಮೀಕ 6:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಕೆಟ್ಟವನ ಮನೇಲಿ, ದೇವರು ಹೇಸುವ ಅನ್ಯಾಯದ ಅಳತೆ ಪಾತ್ರೆನೂ
ಕೆಟ್ಟತನದಿಂದ ಗಳಿಸಿದ ನಿಧಿ ಇನ್ನೂ ಇದ್ಯಾ?
-