2 ಆದ್ರೆ ನೀವು ಒಳ್ಳೇದನ್ನ ದ್ವೇಷಿಸಿ,+ ಕೆಟ್ಟದ್ದನ್ನ ಪ್ರೀತಿಸ್ತೀರ,+
ನನ್ನ ಜನ್ರ ಚರ್ಮ ಸುಲಿದು, ಅವ್ರ ಮೂಳೆಗಳಿಂದ ಮಾಂಸವನ್ನ ಕಿತ್ತುಬಿಡ್ತೀರ.+
3 ಅಷ್ಟೇ ಅಲ್ಲ ನೀವು ನನ್ನ ಜನ್ರ ಮಾಂಸ ತಿಂತೀರ,+
ಅವ್ರ ಚರ್ಮ ಸುಲಿತೀರ,
ಅಡುಗೆ ಪಾತ್ರೆಯಲ್ಲಿ ಬೇಯಿಸೋ ಮಾಂಸ ಮತ್ತು ಮೂಳೆಗಳ ತರ
ನೀವು ಅವ್ರ ಮೂಳೆಗಳನ್ನ ಮುರಿದು ಪುಡಿಪುಡಿ ಮಾಡ್ತೀರ.+