16 ಕುರುಡರನ್ನ ಅವ್ರಿಗೆ ಗೊತ್ತಿಲ್ಲದ ಮಾರ್ಗದಲ್ಲಿ ನಾನು ನಡಿಸ್ತೀನಿ,+
ಅವ್ರಿಗೆ ಪರಿಚಯ ಇಲ್ಲದ ದಾರಿಗಳಲ್ಲಿ ಅವರು ನಡೆಯೋ ಹಾಗೆ ಮಾಡ್ತೀನಿ.+
ಅವ್ರ ಮುಂದಿರೋ ಅಂಧಕಾರವನ್ನ ಬೆಳಕನ್ನಾಗಿ ಬದಲಾಯಿಸ್ತೀನಿ,+
ಏರುಪೇರಾದ ಭೂಪ್ರದೇಶವನ್ನ ಸಮತಟ್ಟಾದ ನೆಲವನ್ನಾಗಿ ಬದಲಾಯಿಸ್ತೀನಿ.+
ನಾನು ಅವ್ರಿಗಾಗಿ ಇದನ್ನೆಲ್ಲಾ ಮಾಡ್ತೀನಿ, ಅವ್ರನ್ನ ನಾನು ತೊರೆಯಲ್ಲ.”