11 ನೋಡು! ಯಾರೆಲ್ಲ ನಿನ್ನ ವಿರುದ್ಧ ಕೋಪಗೊಂಡಿದ್ದಾರೋ ಅವರು ಅವಮಾನಕ್ಕೆ ಗುರಿಯಾಗ್ತಾರೆ, ನಾಚಿಕೆಗೆ ಒಳಗಾಗ್ತಾರೆ.+
ಯಾರೆಲ್ಲ ನಿನ್ನ ಜೊತೆ ಜಗಳ ಆಡ್ತಾರೋ ಅವರು ಹೇಳಹೆಸರಿಲ್ಲದ ಹಾಗೆ ನಾಶವಾಗಿ ಹೋಗ್ತಾರೆ.+
12 ನಿನ್ನ ವಿರುದ್ಧ ಹೋರಾಡಿದವರನ್ನ ನೀನು ಹುಡುಕಿದ್ರೂ ಅವರು ನಿನಗೆ ಸಿಗಲ್ಲ,
ನಿನ್ನ ಜೊತೆ ಯುದ್ಧ ಮಾಡಿದವರು ಅಸ್ತಿತ್ವದಲ್ಲೇ ಇಲ್ಲದ ಹಾಗೆ ಅಳಿದುಹೋಗ್ತಾರೆ.+