17 ಆಮೇಲೆ ರಾಜ ಚಿದ್ಕೀಯ ಯೆರೆಮೀಯನನ್ನ ಅರಮನೆಗೆ ಕರೆಸಿ ಅವನ ಹತ್ರ ಗುಟ್ಟಾಗಿ “ಯೆಹೋವ ಏನಾದ್ರೂ ಸಂದೇಶ ಕೊಟ್ಟಿದ್ದಾನಾ?” ಅಂತ ಕೇಳಿದ.+ ಅದಕ್ಕೆ ಯೆರೆಮೀಯ “ಹೌದು!” ಅಂದ. “ನೀನು ಬಾಬೆಲಿನ ರಾಜನ ಕೈಯಲ್ಲಿ ಸಿಕ್ಕಿ ಬೀಳ್ತೀಯ”+ ಅಂದ.
5 ಆದ್ರೆ ಕಸ್ದೀಯರ ಸೈನಿಕರು ಅವ್ರ ಹಿಂದೆನೇ ಹೋಗಿ ಯೆರಿಕೋವಿನ ಬಯಲು ಪ್ರದೇಶಗಳಲ್ಲಿ ಚಿದ್ಕೀಯನನ್ನ ಹಿಡಿದು+ ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಹತ್ರ ತಂದ್ರು. ಆ ರಾಜ ಆಗ ಹಾಮಾತ್+ ದೇಶದ ರಿಬ್ಲದಲ್ಲಿ+ ಇದ್ದ. ಅಲ್ಲಿ ಅವನು ಚಿದ್ಕೀಯನಿಗೆ ಶಿಕ್ಷೆ ಕೊಟ್ಟ.