-
ಯಾಜಕಕಾಂಡ 25:39-42ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
39 ಅಕ್ಕಪಕ್ಕ ವಾಸಿಸೋ ಇಸ್ರಾಯೇಲ್ಯ ಸಹೋದರರಲ್ಲಿ ಒಬ್ಬ ಬಡವನಾಗಿ ತನ್ನನ್ನೇ ನಿಮಗೆ ಮಾರಿಕೊಂಡ್ರೆ+ ಅವನನ್ನ ಗುಲಾಮನ ತರ ದುಡಿಸ್ಕೊಳ್ಳಬಾರದು.+ 40 ಅವನು ನಿಮ್ಮ ಹತ್ರ ಕೂಲಿ ಕೆಲಸಗಾರ+ ಅಥವಾ ಪ್ರವಾಸಿಗನ ತರ ಇರಬೇಕು. ಬಿಡುಗಡೆ ವರ್ಷದ ತನಕ ಅವನು ನಿಮ್ಮ ಹತ್ರ ಕೆಲಸ ಮಾಡಬೇಕು. 41 ಆಮೇಲೆ ಅವನು ತನ್ನ ಮಕ್ಕಳನ್ನ ಕರ್ಕೊಂಡು ಅವನ ಸಂಬಂಧಿಕರ ಹತ್ರ ವಾಪಸ್ ಹೋಗಬೇಕು. ಅವನ ಪೂರ್ವಜರ ಆಸ್ತಿ ಅವನಿಗೆ ವಾಪಸ್ ಸಿಗಬೇಕು.+ 42 ಇಸ್ರಾಯೇಲ್ಯರು ನನ್ನ ದಾಸರು. ನಾನು ಅವರನ್ನ ಈಜಿಪ್ಟಿಂದ ಕರ್ಕೊಂಡು ಬಂದಿದ್ದೀನಿ.+ ಹಾಗಾಗಿ ಅವರು ತಮ್ಮನ್ನ ಬೇರೆಯವರಿಗೆ ದಾಸರಾಗಿ ಮಾರಿಕೊಳ್ಳಬಾರದು.
-
-
ಧರ್ಮೋಪದೇಶಕಾಂಡ 15:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನಿಮಗೆ ಮಾರಿರೋ ಒಬ್ಬ ಇಬ್ರಿಯ ಪುರುಷ ಅಥವಾ ಸ್ತ್ರೀ ನಿಮ್ಮ ಹತ್ರ ಆರು ವರ್ಷ ಕೆಲಸ ಮಾಡಿದ್ರೆ ಏಳನೇ ವರ್ಷ ಆ ಇಬ್ರಿಯನನ್ನ ಬಿಡುಗಡೆ ಮಾಡಬೇಕು.+
-