13 ಕಾರೇಹನ ಮಗ ಯೋಹಾನಾನ್, ದೇಶದ ಎಲ್ಲಾ ಕಡೆ ಇದ್ದ ಸೇನಾಪತಿಗಳೆಲ್ಲ ಮಿಚ್ಪಾದಲ್ಲಿದ್ದ ಗೆದಲ್ಯನ ಹತ್ರ ಬಂದ್ರು. 14 ಅವರು ಅವನಿಗೆ “ಅಮ್ಮೋನಿಯರ+ ರಾಜ ಬಾಲೀಸ ನಿನ್ನನ್ನ ಕೊಲ್ಲೋಕೆ ನೆತನ್ಯನ ಮಗನಾದ ಇಷ್ಮಾಯೇಲನನ್ನ ಕಳಿಸಿದ್ದಾನೆ ಅಂತ ನಿನಗೆ ಗೊತ್ತಿದ್ಯಾ?”+ ಅಂತ ಕೇಳಿದ್ರು. ಆದ್ರೆ ಅಹೀಕಾಮನ ಮಗ ಗೆದಲ್ಯ ಅವ್ರನ್ನ ನಂಬಲಿಲ್ಲ.