-
2 ಅರಸು 25:8-10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಬಾಬೆಲಿನ ರಾಜ ನೆಬೂಕದ್ನೆಚ್ಚರ ಆಳ್ತಿದ್ದ 19ನೇ ವರ್ಷದ ಐದನೇ ತಿಂಗಳಿನ ಏಳನೇ ದಿನದಲ್ಲಿ ಅವನ ಸೇವಕನೂ ಕಾವಲುಗಾರರ ಮುಖ್ಯಸ್ಥನೂ ಆಗಿದ್ದ ನೆಬೂಜರದಾನ+ ಯೆರೂಸಲೇಮಿಗೆ ಬಂದ.+ 9 ಅವನು ಯೆಹೋವನ ಆಲಯವನ್ನ,+ ರಾಜನ ಅರಮನೆಯನ್ನ,+ ಯೆರೂಸಲೇಮಿನಲ್ಲಿದ್ದ ಎಲ್ಲ ಮನೆಗಳನ್ನ ಸುಟ್ಟುಹಾಕಿದ.+ ಅಷ್ಟೇ ಅಲ್ಲ ಆ ಪಟ್ಟಣದಲ್ಲಿದ್ದ ಎಲ್ಲ ಮುಖ್ಯ ವ್ಯಕ್ತಿಗಳ ಮನೆಗಳನ್ನ ಸಹ ಸುಟ್ಟುಹಾಕಿದ.+ 10 ಕಾವಲುಗಾರರ ಮುಖ್ಯಸ್ಥನ ಜೊತೆ ಇದ್ದ ಕಸ್ದೀಯರ ಇಡೀ ಸೈನ್ಯ ಯೆರೂಸಲೇಮಿನ ಸುತ್ತ ಇದ್ದ ಗೋಡೆಗಳನ್ನ ಕೆಡವಿಹಾಕಿತು.+
-
-
2 ಪೂರ್ವಕಾಲವೃತ್ತಾಂತ 34:24, 25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ‘ಯೆಹೋವ ಹೀಗೆ ಹೇಳ್ತಾನೆ “ಈ ಸ್ಥಳದ ಮೇಲೆ ಮತ್ತು ಅದ್ರ ಜನ್ರ ಮೇಲೆ ನಾನು ಕಷ್ಟ ತರ್ತಿನಿ,+ ಯೆಹೂದದ ರಾಜನ ಮುಂದೆ ಓದಿದ ಆ ಪುಸ್ತಕದಲ್ಲಿ ಬರೆಯಲಾಗಿರೋ ಎಲ್ಲ ಶಾಪಗಳನ್ನ+ ಬರೋ ತರ ಮಾಡ್ತೀನಿ. 25 ಯಾಕಂದ್ರೆ ಅವರು ನನ್ನನ್ನು ಬಿಟ್ಟು+ ಬೇರೆ ದೇವರುಗಳ ಮುಂದೆ ಬಲಿಗಳನ್ನ ಅರ್ಪಿಸಿ ತಮ್ಮ ಕೆಲಸಗಳಿಂದ ನನಗೆ ಕೋಪ ಬರಿಸಿದ್ದಾರೆ.+ ಹಾಗಾಗಿ ಈ ಸ್ಥಳದ ಮೇಲೆ ನನ್ನ ಕೋಪ ಹೊತ್ತಿ ಉರಿತಿದೆ. ಅದು ಆರಿಹೋಗಲ್ಲ.”’+
-
-
2 ಪೂರ್ವಕಾಲವೃತ್ತಾಂತ 36:16, 17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆದರೆ ಅವರು ಸತ್ಯ ದೇವರ ಸಂದೇಶವಾಹಕರನ್ನ ಹೀಯಾಳಿಸ್ತಾ ಇದ್ರು.+ ಅವರು ಆತನ ಮಾತುಗಳನ್ನ ತುಚ್ಛವಾಗಿ ಕಂಡ್ರು.+ ಆತನ ಪ್ರವಾದಿಗಳನ್ನ ಗೇಲಿಮಾಡಿದ್ರು.+ ಯೆಹೋವನ ಕೋಪ ಆತನ ಜನ್ರ ಮೇಲೆ ಬರೋ ತನಕ+ ಸನ್ನಿವೇಶ ಕೈಮೀರಿ ಹೋಗೋ ತನಕ ಅವರು ಹೀಗೇ ಮಾಡಿದ್ರು.
17 ಹಾಗಾಗಿ ದೇವರು ಅವ್ರ ಮೇಲೆ ಕಸ್ದೀಯರ+ ರಾಜ ಆಕ್ರಮಣಮಾಡೋ ತರ ಮಾಡಿದನು. ಆ ರಾಜ ಬಂದು ಅವ್ರ ಆರಾಧನಾ ಸ್ಥಳದಲ್ಲೇ+ ಅವ್ರ ಯುವಕರನ್ನ ಕತ್ತಿಯಿಂದ ಕೊಂದುಹಾಕಿದ.+ ಅವನು ಹುಡುಗರನ್ನ, ಕನ್ಯೆಯರನ್ನ, ವಯಸ್ಸಾದವರನ್ನ ಮತ್ತು ಅಸ್ವಸ್ಥರನ್ನ ಹೀಗೆ ಎಲ್ರನ್ನೂ ಕೊಂದುಹಾಕಿದ. ಯಾರಿಗೂ ಕರುಣೆ ತೋರಿಸಲಿಲ್ಲ.+ ದೇವರು ಎಲ್ಲವನ್ನೂ ಅವನ ಕೈಗೆ ಒಪ್ಪಿಸಿದ.+
-