19 ಯೆಹೋವ ಅವ್ರನ್ನ ಮತ್ತೆ ತನ್ನ ಹತ್ರ ವಾಪಸ್ ಕರ್ಕೊಂಡು ಬರೋಕೆ ಪ್ರವಾದಿಗಳನ್ನ ಕಳಿಸ್ತಾನೇ ಇದ್ದನು ಮತ್ತು ಆ ಪ್ರವಾದಿಗಳ ಮೂಲಕ ಅವರನ್ನ ಎಚ್ಚರಿಸ್ತಾ* ಇದ್ದನು. ಆದ್ರೆ ಅವರು ಆತನ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ.+
26 ಹಾಗಿದ್ರೂ ನಿನ್ನ ಮಾತು ಕೇಳದೆ ನಿನ್ನ ವಿರುದ್ಧ ತಿರುಗಿಬಿದ್ರು.+ ನಿನ್ನ ನಿಯಮ ಪುಸ್ತಕವನ್ನ ತಿರಸ್ಕರಿಸಿದ್ರು. ನಿನ್ನ ಹತ್ರ ವಾಪಸ್ ಬರೋಕೆ ಪ್ರವಾದಿಗಳು ಅವ್ರನ್ನ ಎಚ್ಚರಿಸಿದ್ರು. ಆದ್ರೆ ಆ ನಿನ್ನ ಪ್ರವಾದಿಗಳನ್ನೇ ಕೊಂದು ಹಾಕಿದ್ರು. ಅವರು ಕೆಟ್ಟ ಕೆಲಸ ಮಾಡಿ ನಿನಗೆ ತುಂಬ ಅವಮಾನ ಮಾಡಿದ್ರು.+