-
2 ಪೂರ್ವಕಾಲವೃತ್ತಾಂತ 36:15, 16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಅವ್ರ ಪೂರ್ವಜರ ದೇವರಾದ ಯೆಹೋವ ಸಂದೇಶವಾಹಕರ ಮೂಲಕ ಅವ್ರಿಗೆ ಎಚ್ಚರಿಕೆಯನ್ನ ಕೊಡ್ತಾ ಇದ್ದ. ಆತನಿಗೆ ತನ್ನ ಜನ್ರ ಮೇಲೆ ಮತ್ತು ತನ್ನ ನಿವಾಸದ ಮೇಲೆ ಕನಿಕರ ಇದ್ದಿದ್ರಿಂದ ಆತನು ಅವ್ರನ್ನ ಪದೇಪದೇ ಎಚ್ಚರಿಸಿದ. 16 ಆದರೆ ಅವರು ಸತ್ಯ ದೇವರ ಸಂದೇಶವಾಹಕರನ್ನ ಹೀಯಾಳಿಸ್ತಾ ಇದ್ರು.+ ಅವರು ಆತನ ಮಾತುಗಳನ್ನ ತುಚ್ಛವಾಗಿ ಕಂಡ್ರು.+ ಆತನ ಪ್ರವಾದಿಗಳನ್ನ ಗೇಲಿಮಾಡಿದ್ರು.+ ಯೆಹೋವನ ಕೋಪ ಆತನ ಜನ್ರ ಮೇಲೆ ಬರೋ ತನಕ+ ಸನ್ನಿವೇಶ ಕೈಮೀರಿ ಹೋಗೋ ತನಕ ಅವರು ಹೀಗೇ ಮಾಡಿದ್ರು.
-
-
ಯೆರೆಮೀಯ 7:24-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಆದ್ರೆ ಅವರು ಕಿವಿಗೇ ಹಾಕೊಳ್ಳಲಿಲ್ಲ, ನನ್ನ ಮಾತು ಕೇಳಲಿಲ್ಲ,+ ತಮಗೆ ಇಷ್ಟಬಂದ ಹಾಗೆ* ನಡೆದ್ರು, ಹಠಮಾರಿಗಳ ತರ ತಮ್ಮ ಕೆಟ್ಟಹೃದಯ ಹೇಳೋದನ್ನೇ ಮಾಡಿದ್ರು,+ ಅವರು ಇನ್ನೂ ಕೆಟ್ಟು ಹೋದ್ರು, ಸ್ವಲ್ಪನೂ ಬದಲಾಗಲಿಲ್ಲ. 25 ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಬಂದ ದಿನದಿಂದ ಇವತ್ತಿನ ತನಕ ಹೀಗೇ ನಡಿತಿದೆ.+ ಹಾಗಾಗಿ ನನ್ನ ಸೇವಕರಾದ ಪ್ರವಾದಿಗಳನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೆ. ಪ್ರತಿದಿನ, ಪದೇ ಪದೇ ನಾನು ಆ ಪ್ರವಾದಿಗಳನ್ನ ಕಳಿಸಿದೆ.*+ 26 ಆದ್ರೆ ಈ ಜನ್ರು ನನ್ನ ಮಾತು ಕೇಳಲಿಲ್ಲ,+ ಹಠಮಾರಿಗಳಾಗಿದ್ರು, ತಮ್ಮ ಪೂರ್ವಜರಿಗಿಂತ ಕೆಟ್ಟವರಾದ್ರು!
-
-
ಯೆರೆಮೀಯ 35:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ನನ್ನ ಸೇವಕರಾದ ಪ್ರವಾದಿಗಳನ್ನ ನಿಮ್ಮ ಹತ್ರ ಪದೇಪದೇ* ಕಳಿಸ್ತಾ+ ‘ದಯವಿಟ್ಟು ನೀವೆಲ್ಲ ಕೆಟ್ಟದಾರಿ ಬಿಟ್ಟು ವಾಪಸ್ ಬನ್ನಿ,+ ಸರಿಯಾಗಿರೋದನ್ನೇ ಮಾಡಿ! ಬೇರೆ ದೇವರುಗಳನ್ನ ಆರಾಧಿಸಬೇಡಿ, ಅವುಗಳ ಸೇವೆ ಮಾಡಬೇಡಿ. ಆಗ ನಾನು ನಿಮಗೆ, ನಿಮ್ಮ ಪೂರ್ವಜರಿಗೆ ಕೊಟ್ಟ ದೇಶದಲ್ಲೇ ನೀವು ಯಾವಾಗ್ಲೂ ಇರ್ತಿರ’+ ಅಂತ ಹೇಳ್ತಿದ್ದೆ. ಆದ್ರೆ ನೀವು ನನಗೆ ಒಂಚೂರೂ ಕಿವಿಗೊಡಲಿಲ್ಲ. ನನ್ನ ಮಾತು ಕೇಳಲಿಲ್ಲ.
-