-
1 ಅರಸು 11:1-3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆದ್ರೆ ರಾಜ ಸೊಲೊಮೋನ ಫರೋಹನ ಮಗಳನ್ನ+ ಮಾತ್ರ ಅಲ್ಲ ಬೇರೆ ದೇಶದ ಸ್ತ್ರೀಯರನ್ನ+ ಅಂದ್ರೆ ಮೋವಾಬ್ಯರ,+ ಅಮ್ಮೋನಿಯರ,+ ಎದೋಮ್ಯರ, ಸೀದೋನ್ಯರ,+ ಹಿತ್ತಿಯರ+ ಸ್ತ್ರೀಯರನ್ನೂ ಪ್ರೀತಿಸಿದ. 2 ಯೆಹೋವ ಆ ದೇಶಗಳ ಜನ್ರ ಬಗ್ಗೆ ಇಸ್ರಾಯೇಲ್ಯರಿಗೆ “ನೀವು ಅವ್ರ ಜೊತೆ ಸೇರ್ಬಾರ್ದು,* ಅವ್ರೂ ನಿಮ್ಮ ಜೊತೆ ಸೇರ್ಬಾರ್ದು. ಒಂದುವೇಳೆ ಸೇರಿದ್ರೆ ನೀವು ಅವ್ರ ದೇವರುಗಳನ್ನ ಆರಾಧಿಸೋ ತರ ಅವರು ನಿಮ್ಮ ಹೃದಯವನ್ನ ತಿರುಗಿಸಿ ಬಿಡ್ತಾರೆ”+ ಅಂತ ಹೇಳಿದ್ದನು. ಆದ್ರೆ ಸೊಲೊಮೋನ ಆ ದೇಶದ ಸ್ತ್ರೀಯರ ಜೊತೆ ಸೇರ್ತಿದ್ದ, ಅವ್ರನ್ನೇ ಪ್ರೀತಿಸಿದ. 3 ಅವನಿಗೆ 700 ಹೆಂಡತಿಯರಿದ್ರು. ಅವ್ರೆಲ್ಲ ರಾಜಕುಮಾರಿಯರು. ಅವನಿಗೆ 300 ಉಪಪತ್ನಿಯರೂ ಇದ್ರು. ನಿಧಾನವಾಗಿ ಅವನ ಹೆಂಡತಿಯರು ಅವನನ್ನ ದಾರಿ ತಪ್ಪಿಸಿದ್ರು.
-