-
ಯೆರೆಮೀಯ 36:22-24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ರಾಜ ಚಳಿಗಾಲದ ಮನೆಯಲ್ಲಿ ಬೆಂಕಿ ಉರಿತಿದ್ದ ಅಗ್ಗಿಷ್ಟಿಕೆ ಮುಂದೆ ಕೂತಿದ್ದ. ಅದು ಒಂಬತ್ತನೇ ತಿಂಗಳು.* 23 ಯೆಹೂದಿ ಆ ಸುರುಳಿಯಲ್ಲಿದ್ದ ಮೂರು-ನಾಲ್ಕು ಭಾಗಗಳನ್ನ ಓದಿದ ಮೇಲೆ ರಾಜ ಕಾರ್ಯದರ್ಶಿಯ ಚಾಕು ತಗೊಂಡು ಆ ಭಾಗಗಳನ್ನ ಕತ್ತರಿಸ್ತಾ ಅಗ್ಗಿಷ್ಟಿಕೆಯಲ್ಲಿ ಉರಿತಿದ್ದ ಬೆಂಕಿಗೆ ಎಸಿತಿದ್ದ. ಹೀಗೆ ಆ ಇಡೀ ಸುರುಳಿಯನ್ನ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟುಬಿಟ್ಟ. 24 ಸುರುಳಿಯಲ್ಲಿದ್ದ ಮಾತನ್ನೆಲ್ಲ ಕೇಳಿಸ್ಕೊಂಡ ಮೇಲೆ ರಾಜನಾಗಲಿ ಅವನ ಯಾವ ಸೇವಕರಾಗಲಿ ಸ್ವಲ್ಪನೂ ಭಯಪಡಲಿಲ್ಲ, ದುಃಖದಿಂದ ಬಟ್ಟೆ ಹರ್ಕೊಳ್ಳಲೂ ಇಲ್ಲ.
-