-
1 ಅರಸು 9:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಈ ಆಲಯ ಹಾಳು ಕುಪ್ಪೆ ಆಗುತ್ತೆ.+ ಇದ್ರ ಮುಂದೆ ಹಾದು ಹೋಗೋರೆಲ್ಲ ಹುಬ್ಬೇರಿಸಿ ಇದ್ರ ಕಡೆಗೆ ನೋಡಿ* ‘ಯೆಹೋವ ಈ ದೇಶಕ್ಕೂ, ಈ ಆಲಯಕ್ಕೂ ಎಂಥ ಗತಿ ಬರೋ ತರ ಮಾಡಿದ್ದಾನೆ’ ಅಂತ ಅಣಕಿಸ್ತಾರೆ.+ 9 ಆಮೇಲೆ ಅವರು ‘ಈ ಇಸ್ರಾಯೇಲ್ಯರು ಈಜಿಪ್ಟಿಂದ ತಮ್ಮ ಪೂರ್ವಜರನ್ನ ಬಿಡಿಸ್ಕೊಂಡು ಬಂದ ತಮ್ಮ ದೇವರಾದ ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನ ಮಾಡ್ಕೊಂಡ್ರು, ಅಡ್ಡಬಿದ್ರು, ಅವನ್ನ ಆರಾಧಿಸಿದ್ರು. ಹಾಗಾಗಿ ಯೆಹೋವ ಅವ್ರ ಮೇಲೆ ಈ ಕಷ್ಟವನ್ನ ತಂದನು’”+ ಅಂತಾರೆ.
-