10 ಅವ್ರಿಗೆ ಹೀಗೆ ಹೇಳು ‘ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ಬಾಬೆಲಿನ ರಾಜ ನನ್ನ ಸೇವಕ ಆದ ನೆಬೂಕದ್ನೆಚ್ಚರನನ್ನ* ನಾನು ಕರಿಸ್ತೀನಿ.+ ನಾನು ಬಚ್ಚಿಟ್ಟ ಈ ಕಲ್ಲುಗಳ ಮೇಲೆ ಅವನ ಸಿಂಹಾಸನ ಇಡ್ತೀನಿ. ಅವನು ತನ್ನ ರಾಜವೈಭವದ ಡೇರೆಯನ್ನ ಅವುಗಳ ಮೇಲೆ ಹರಡ್ತಾನೆ.+
19 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಬಾಬೆಲಿನ ರಾಜ ನೆಬೂಕದ್ನೆಚ್ಚರನಿಗೆ* ಈಜಿಪ್ಟನ್ನ ಕೊಡ್ತೀನಿ.+ ಅವನು ಆ ದೇಶದ ಸಿರಿಸಂಪತ್ತನ್ನ ಬಾಚ್ಕೊಂಡು ಹೋಗ್ತಾನೆ, ಅಲ್ಲಿರೋದನ್ನೆಲ್ಲ ಲೂಟಿ ಮಾಡ್ತಾನೆ. ಅದೇ ಅವನ ಸೈನಿಕರಿಗೆ ಸಿಗೋ ಸಂಬಳ.