ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 25:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಹಾಗಾಗಿ ನಾನು ಯೆಹೋವನ ಕೈಯಿಂದ ಆ ಬಟ್ಟಲನ್ನ ತಗೊಂಡೆ, ಯೆಹೋವ ನನ್ನನ್ನ ಯಾವ್ಯಾವ ದೇಶಗಳ ಹತ್ರ ಕಳಿಸಿದ್ನೋ ಆ ಎಲ್ಲ ದೇಶಗಳಿಗೆ ಆ ಬಟ್ಟಲಲ್ಲಿರೋದನ್ನ ಕುಡಿಸಿದೆ.+

  • ಯೆರೆಮೀಯ 25:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಅವ್ರ ಮಧ್ಯ ವಾಸ ಮಾಡ್ತಿದ್ದ ಎಲ್ಲ ವಿದೇಶಿಯರಿಗೆ ಅದನ್ನ ಕುಡಿಸಿದೆ. ಆಮೇಲೆ ಊಚ್‌ ದೇಶದ ಎಲ್ಲ ರಾಜರಿಗೆ, ಫಿಲಿಷ್ಟಿಯರ ದೇಶದ ಎಲ್ಲ ರಾಜರಿಗೆ+ ಅಂದ್ರೆ ಅಷ್ಕೆಲೋನಿನ+ ರಾಜ, ಗಾಜಾದ ರಾಜ, ಎಕ್ರೋನಿನ ರಾಜ, ಅಷ್ಡೋದಿನಲ್ಲಿ ಉಳಿದ ಜನ್ರ ರಾಜನಿಗೆ ಅದನ್ನ ಕುಡಿಸಿದೆ.

  • ಯೆಹೆಜ್ಕೇಲ 25:15, 16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ವಿಶ್ವದ ರಾಜ ಯೆಹೋವ ಹೀಗಂದನು: ‘ಫಿಲಿಷ್ಟಿಯರು ಮುಂಚಿಂದಾನೂ ಇರೋ ದ್ವೇಷದಿಂದ ಇಸ್ರಾಯೇಲ್ಯರಿಗೆ ಸೇಡು ತೀರಿಸಿ ಸರ್ವನಾಶ ಮಾಡಬೇಕು ಅಂತ ಪ್ರಯತ್ನಿಸ್ತಾ ಕೆಟ್ಟ ಬುದ್ಧಿ ತೋರಿಸಿದ್ದಾರೆ.+ 16 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಫಿಲಿಷ್ಟಿಯರಿಗೆ ಶಿಕ್ಷೆ ಕೊಡ್ತೀನಿ,+ ಕೆರೇತ್ಯರನ್ನ ನಾಶ ಮಾಡ್ತೀನಿ.+ ಸಮುದ್ರ ತೀರದಲ್ಲಿ ವಾಸಿಸೋ ಜನ್ರಲ್ಲಿ ಉಳಿದವ್ರನ್ನ ನಾಶ ಮಾಡ್ತೀನಿ.+

  • ಆಮೋಸ 1:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಯೆಹೋವ ಹೀಗೆ ಹೇಳ್ತಾನೆ:

      ‘“ಗಾಜಾ ಪದೇಪದೇ* ದಂಗೆ ಎದ್ದಿದೆ,+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,

      ಅವರು ಸೆರೆವಾಸಿಗಳನ್ನೆಲ್ಲ+ ಎದೋಮಿನ ಕೈಗೊಪ್ಪಿಸಿದ್ರು.

  • ಚೆಫನ್ಯ 2:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಯಾಕಂದ್ರೆ ಗಾಜಾ ಪಟ್ಟಣ ಖಾಲಿಖಾಲಿ ಹೊಡಿಯುತ್ತೆ,

      ಅಷ್ಕೆಲೋನ್‌ ಹಾಳಾಗಿ ಹೋಗುತ್ತೆ.+

      ಅಷ್ಡೋದಿನ ಜನ್ರನ್ನ ಹಾಡಹಗಲಲ್ಲೇ* ಅಟ್ಟಿಸ್ಕೊಂಡು ಹೋಗ್ತಾರೆ,

      ಎಕ್ರೋನನ್ನ ಬುಡ ಸಮೇತ ಕಿತ್ತುಹಾಕ್ತಾರೆ.+

  • ಜೆಕರ್ಯ 9:5, 6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಅಷ್ಕೆಲೋನ್‌ ಅದನ್ನ ನೋಡಿ ಹೆದರಿಹೋಗುತ್ತೆ,

      ಗಾಜಾ ಸಂಕಟಪಡುತ್ತೆ,

      ಎಕ್ರೋನಿನ ನಿರೀಕ್ಷೆ ನುಚ್ಚುನೂರಾಗೋದ್ರಿಂದ ಅದಕ್ಕೂ ಇದೇ ಸ್ಥಿತಿ ಬರುತ್ತೆ.

      ಗಾಜಾದ ರಾಜ ಹೇಳಹೆಸ್ರಿಲ್ಲದ ಹಾಗೆ ನಾಶ ಆಗ್ತಾನೆ,

      ಅಷ್ಕೆಲೋನ್‌ ನಿರ್ಜನವಾಗುತ್ತೆ.+

       6 ವ್ಯಭಿಚಾರದಿಂದ ಹುಟ್ಟಿದ ಮಗ ಅಷ್ಡೋದಿನಲ್ಲಿ ನೆಲೆಸ್ತಾನೆ,

      ನಾನು ಫಿಲಿಷ್ಟಿಯರ ಅಹಂಕಾರ ಮುರಿತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ