-
ಧರ್ಮೋಪದೇಶಕಾಂಡ 28:53-57ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
53 ಹಾಗೆ ಮುತ್ತಿಗೆ ಹಾಕಿ ಶತ್ರುಗಳು ನಿಮಗೆ ತುಂಬ ಕಷ್ಟಕೊಡ್ತಾರೆ. ಎಷ್ಟು ಕಷ್ಟ ಕೊಡ್ತಾರಂದ್ರೆ, ನಿಮ್ಮ ಸ್ವಂತ ಮಕ್ಕಳನ್ನೇ ಅಂದ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಗಂಡು ಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನಬೇಕಾಗುತ್ತೆ.+
54 ನಿಮ್ಮಲ್ಲಿ ತುಂಬ ಮೃದುಸ್ವಭಾವದ, ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದ ವ್ಯಕ್ತಿನೂ ತನ್ನ ಅಣ್ಣತಮ್ಮನಿಗೆ, ತುಂಬ ಪ್ರೀತಿಸೋ ತನ್ನ ಹೆಂಡತಿಗೆ, ಉಳಿದಿರೋ ತನ್ನ ಮಕ್ಕಳಿಗೆ ಒಂಚೂರೂ ಕನಿಕರ ತೋರಿಸಲ್ಲ. 55 ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆಹಾಕಿ ಮಾಡೋ ನಾಶ ಹೇಗಿರುತ್ತೆ ಅಂದ್ರೆ, ಅವನಿಗೆ ತಿನ್ನೋಕೆ ಏನೂ ಇರಲ್ಲ. ಹಾಗಾಗಿ ತನ್ನ ಮಕ್ಕಳ ಮಾಂಸವನ್ನೇ ತಿಂತಾನೆ. ಬೇರೆಯವರಿಗೆ ಸ್ವಲ್ಪನೂ ಕೊಡಲ್ಲ.+ 56 ಕಾಲು ನೆಲಕ್ಕೆ ಸೋಕದ ಹಾಗೆ ಬೆಳೆದ ಮೃದುವಾದ ಸ್ತ್ರೀ+ ಕೂಡ ತನ್ನ ಪ್ರಾಣಪ್ರಿಯನಾದ ಗಂಡನಿಗೆ, ತನ್ನ ಗಂಡುಹೆಣ್ಣು ಮಕ್ಕಳಿಗೆ ಕನಿಕರ ತೋರಿಸಲ್ಲ. 57 ಅವಳು ತಾನು ಆಗಷ್ಟೇ ಹೆತ್ತ ಕೂಸಿಗೂ ಕನಿಕರ ತೋರಿಸದೆ ಆ ಕೂಸನ್ನೂ ಹೆರಿಗೆ ಸಮಯದಲ್ಲಿ ಗರ್ಭದಿಂದ ಹೊರಗೆ ಬಂದ ಎಲ್ಲಾನೂ ಕದ್ದುಮುಚ್ಚಿ ತಿಂತಾಳೆ. ಶತ್ರುಗಳು ನಿಮ್ಮ ಪಟ್ಟಣಗಳಿಗೆ ಹಾಕೋ ಮುತ್ತಿಗೆಯಿಂದ, ಅವರು ನಿಮಗೆ ಕೊಡೋ ಕಷ್ಟಗಳಿಂದ ನಿಮಗೆ ಸಾಕಾಗಿ ಹೋಗುತ್ತೆ.
-
-
2 ಅರಸು 25:3-7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನಾಲ್ಕನೇ ತಿಂಗಳಿನ ಒಂಬತ್ತನೇ ದಿನದಲ್ಲಿ ಬರಗಾಲ ಹೆಚ್ಚಾಯ್ತು.+ ಇದ್ರಿಂದ ದೇಶದ ಜನ್ರ ಹತ್ರ ತಿನ್ನೋಕೆ ಆಹಾರ ಇರಲಿಲ್ಲ.+ 4 ಆಗ ಪಟ್ಟಣದ ಗೋಡೆಯನ್ನ ಕೆಡವಿ ಹಾಕಲಾಯ್ತು.+ ಕಸ್ದೀಯರು ಪಟ್ಟಣವನ್ನ ಸುತ್ತುವರಿಯುತ್ತಿದ್ದಾಗ ಯೆರೂಸಲೇಮಿನ ಸೈನಿಕರೆಲ್ಲ ರಾತ್ರೋರಾತ್ರಿ ರಾಜನ ತೋಟದ ಪಕ್ಕದಲ್ಲಿದ್ದ ಎರಡು ಗೋಡೆಗಳ ಮಧ್ಯದಿಂದ ಓಡಿಹೋದ್ರು. ಅರಾಬಾ ದಾರಿಯಲ್ಲಿ ರಾಜ ಓಡಿಹೋದ.+ 5 ಆದ್ರೆ ಕಸ್ದೀಯರ ಸೈನಿಕರು ರಾಜನನ್ನ ಅಟ್ಟಿಸ್ಕೊಂಡು ಹೋಗಿ ಯೆರಿಕೋವಿನ ಬಯಲು ಪ್ರದೇಶಗಳಲ್ಲಿ ಅವನನ್ನ ಹಿಡಿದ್ರು. ಆಗ ರಾಜನ ಸೈನಿಕರೆಲ್ಲ ಅವನನ್ನ ಬಿಟ್ಟು ದಿಕ್ಕುಪಾಲಾಗಿ ಓಡಿಹೋದ್ರು. 6 ಆಮೇಲೆ ಅವರು ರಾಜನನ್ನ ಬಂಧಿಸಿ+ ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಕರ್ಕೊಂಡು ಬಂದ್ರು. ಅಲ್ಲಿ ಅವನಿಗೆ ಶಿಕ್ಷೆ ಸಿಕ್ತು. 7 ಅವರು ಚಿದ್ಕೀಯನ ಗಂಡು ಮಕ್ಕಳನ್ನ ಅವನ ಕಣ್ಮುಂದೆನೇ ಕಡಿದುಹಾಕಿದ್ರು. ನೆಬೂಕದ್ನೆಚ್ಚರ ಚಿದ್ಕೀಯನ ಕಣ್ಣುಗಳನ್ನ ಕುರುಡು ಮಾಡಿ ಅವನಿಗೆ ತಾಮ್ರದ ಬೇಡಿಗಳನ್ನ ಹಾಕಿ ಬಾಬೆಲಿಗೆ ಕರ್ಕೊಂಡು ಬಂದ.+
-