16 ‘ಯೆಹೋವ ಹೀಗೆ ಹೇಳ್ತಾನೆ: “ಯೆಹೂದದ ರಾಜ ಆ ಪುಸ್ತಕದಲ್ಲಿ ಓದಿದ ಮಾತುಗಳ ಪ್ರಕಾರನೇ ನಾನು ಈ ಸ್ಥಳದ ಮೇಲೆ, ಅದ್ರ ಜನ್ರ ಮೇಲೆ ಕಷ್ಟ ತರ್ತೀನಿ.+17 ಅವರು ನನ್ನನ್ನ ಬಿಟ್ಟು ಬೇರೆ ದೇವರುಗಳ ಮುಂದೆ ಬಲಿಗಳನ್ನ ಅರ್ಪಿಸಿ+ ತಮ್ಮ ಕೆಲಸಗಳಿಂದ ನನಗೆ ಕೋಪ ಬರಿಸಿದ್ದಾರೆ.+ ಹಾಗಾಗಿ ಈ ಸ್ಥಳದ ಮೇಲೆ ನನ್ನ ಕೋಪ ಹೊತ್ತಿ ಉರಿತಿದೆ. ಅದು ಆರಿಹೋಗಲ್ಲ.”’+