-
ಯೆರೆಮೀಯ 39:5-7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಆದ್ರೆ ಕಸ್ದೀಯರ ಸೈನಿಕರು ಅವ್ರ ಹಿಂದೆನೇ ಹೋಗಿ ಯೆರಿಕೋವಿನ ಬಯಲು ಪ್ರದೇಶಗಳಲ್ಲಿ ಚಿದ್ಕೀಯನನ್ನ ಹಿಡಿದು+ ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಹತ್ರ ತಂದ್ರು. ಆ ರಾಜ ಆಗ ಹಾಮಾತ್+ ದೇಶದ ರಿಬ್ಲದಲ್ಲಿ+ ಇದ್ದ. ಅಲ್ಲಿ ಅವನು ಚಿದ್ಕೀಯನಿಗೆ ಶಿಕ್ಷೆ ಕೊಟ್ಟ. 6 ಆ ರಿಬ್ಲದಲ್ಲೇ ಚಿದ್ಕೀಯನ ಕಣ್ಮುಂದೆನೇ ಅವನ ಗಂಡುಮಕ್ಕಳನ್ನ ಕೊಂದ. ಯೆಹೂದದ ಎಲ್ಲ ಪ್ರಮುಖರನ್ನ ಕೊಂದ.+ 7 ಆಮೇಲೆ ಅವನು ಚಿದ್ಕೀಯನನ್ನ ಕುರುಡನಾಗಿ ಮಾಡಿದ. ಚಿದ್ಕೀಯನಿಗೆ ತಾಮ್ರದ ಬೇಡಿಗಳನ್ನ ಹಾಕಿ ಬಾಬೆಲಿಗೆ ಕರ್ಕೊಂಡು ಹೋದ.+
-
-
ಯೆರೆಮೀಯ 52:9-11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಆಮೇಲೆ ಕಸ್ದೀಯರ ಸೈನಿಕರು ರಾಜ ಚಿದ್ಕೀಯನನ್ನ ಹಿಡಿದು ಹಾಮಾತ್ ದೇಶದ ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಕರ್ಕೊಂಡು ಬಂದ್ರು. ಅಲ್ಲಿ ಅವನು ಚಿದ್ಕೀಯನಿಗೆ ಶಿಕ್ಷೆ ಕೊಟ್ಟ. 10 ಬಾಬೆಲಿನ ರಾಜ ಚಿದ್ಕೀಯನ ಕಣ್ಮುಂದೆನೇ ಅವನ ಗಂಡುಮಕ್ಕಳನ್ನ ಕೊಂದ. ಯೆಹೂದದ ಎಲ್ಲ ಅಧಿಕಾರಿಗಳನ್ನ ರಿಬ್ಲದಲ್ಲಿ ಕೊಂದುಹಾಕಿದ. 11 ಆಮೇಲೆ ಬಾಬೆಲಿನ ರಾಜ ಚಿದ್ಕೀಯನ ಕಣ್ಣುಗಳನ್ನ ಕುರುಡು ಮಾಡಿದ.+ ತಾಮ್ರದ ಬೇಡಿ ಹಾಕಿ ಬಾಬೆಲಿಗೆ ಕರ್ಕೊಂಡು ಹೋದ, ಸಾಯೋ ತನಕ ಅವನನ್ನ ಜೈಲಲ್ಲಿ ಇಟ್ಟ.
-