-
2 ಅರಸು 17:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಯೆಹೋವ ತನ್ನ ಎಲ್ಲ ಪ್ರವಾದಿಗಳ ಮತ್ತು ದರ್ಶಿಗಳ ಮೂಲಕ ಇಸ್ರಾಯೇಲ್ಯರಿಗೆ, ಯೆಹೂದ್ಯರಿಗೆ “ಸಾಕು, ಇನ್ಮುಂದೆ ಕೆಟ್ಟ ಕೆಲಸ ಮಾಡಬೇಡಿ!+ ನಾನು ನಿಮ್ಮ ಪೂರ್ವಜರಿಗೆ ಮತ್ತು ನಿಮಗೆ ನನ್ನ ಪ್ರವಾದಿಗಳ ಮೂಲಕ ನಿಯಮ ಪುಸ್ತಕದಲ್ಲಿ ಕೊಟ್ಟ ಆಜ್ಞೆಗಳನ್ನ, ನಿಯಮಗಳನ್ನ ಪಾಲಿಸ್ತಾ ಇರಿ” ಅಂತ ಎಚ್ಚರಿಸ್ತಾ ಇದ್ದ.+ 14 ಆದ್ರೆ ಅವರು ಆತನ ಮಾತು ಕೇಳಲಿಲ್ಲ. ತಮ್ಮ ದೇವರಾದ ಯೆಹೋವನ ಮೇಲೆ ನಂಬಿಕೆ ಇಡದ ತಮ್ಮ ಪೂರ್ವಜರ ತರ ಹಠಮಾರಿಗಳಾಗೇ ಇದ್ರು.+
-
-
ಯೆರೆಮೀಯ 7:12-14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 “‘ನನ್ನ ಹೆಸ್ರಿಗೆ ಗೌರವ ತರೋಕೆ ಮೊದಲು ಆರಿಸ್ಕೊಂಡಿದ್ದ+ ಶೀಲೋನಲ್ಲಿನ ನನ್ನ ಆರಾಧನಾ ಸ್ಥಳಕ್ಕೆ ನೀವೀಗ ಹೋಗಿ.+ ನನ್ನ ಜನ್ರಾದ ಇಸ್ರಾಯೇಲ್ಯರು ಕೆಟ್ಟದು ಮಾಡಿದ್ರಿಂದ ನಾನು ಅದಕ್ಕೆ ಏನು ಮಾಡ್ದೆ ಅಂತ ನೋಡಿ.+ 13 ನೀವಂತೂ ಆ ಕೆಟ್ಟ ಕೆಲಸಗಳಲ್ಲಿ ಯಾವುದನ್ನೂ ಬಿಟ್ಟಿಲ್ಲ’ ಅಂತ ಯೆಹೋವ ಹೇಳ್ತಾನೆ. ಅಷ್ಟೇ ಅಲ್ಲ ಆತನು ಹೇಳೋದು ಏನಂದ್ರೆ ‘ನಾನು ನಿಮಗೆ ಪದೇ ಪದೇ ಹೇಳಿದ್ರೂ* ನೀವು ಕಿವಿಗೆ ಹಾಕೊಳ್ಳಲಿಲ್ಲ.+ ನಾನು ನಿಮ್ಮನ್ನ ಕರಿತಾ ಇದ್ರೂ ನೀವು ಉತ್ರ ಕೊಡಲಿಲ್ಲ.+ 14 ಹಾಗಾಗಿ ಶೀಲೋಗೆ ನಾನು ಮಾಡಿದ+ ಹಾಗೆನೇ ನೀವೀಗ ನಂಬಿರೋ+ ನನ್ನ ಹೆಸ್ರಿಗಾಗಿರೋ ನನ್ನ ಆಲಯಕ್ಕೂ ಮಾಡ್ತೀನಿ.+ ನಾನು ನಿಮಗೆ, ನಿಮ್ಮ ಪೂರ್ವಜರಿಗೆ ಕೊಟ್ಟ ಈ ಜಾಗಕ್ಕೂ ಅದೇ ಗತಿ ತರ್ತಿನಿ.
-