11 ಶಾಫಾನನ ಮೊಮ್ಮಗ ಗೆಮರ್ಯನ ಮಗ ಮೀಕಾಯೆಹು ಸುರುಳಿಯಲ್ಲಿದ್ದ ಯೆಹೋವನ ಎಲ್ಲ ಮಾತನ್ನ ಕೇಳಿಸ್ಕೊಂಡಾಗ 12 ರಾಜನ ಅರಮನೆಯಲ್ಲಿದ್ದ ಕಾರ್ಯದರ್ಶಿಯ ಕೋಣೆಗೆ ಬಂದ. ಕಾರ್ಯದರ್ಶಿ ಎಲೀಷಾಮ,+ ಶೆಮಾಯನ ಮಗ ದೆಲಾಯ, ಅಕ್ಬೋರನ+ ಮಗ ಎಲ್ನಾಥಾನ,+ ಶಾಫಾನನ ಮಗ ಗೆಮರ್ಯ, ಹನನ್ಯನ ಮಗ ಚಿದ್ಕೀಯ, ಬೇರೆಲ್ಲ ಅಧಿಕಾರಿಗಳು ಆ ಕೋಣೆಯಲ್ಲಿ ಕೂತಿದ್ರು.