-
2 ಅರಸು 22:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಪುರೋಹಿತ ಹಿಲ್ಕೀಯನಿಗೆ, ಶಾಫಾನನ ಮಗ ಅಹೀಕಾಮನಿಗೆ,+ ಮೀಕಾಯನ ಮಗ ಅಕ್ಬೋರನಿಗೆ, ಕಾರ್ಯದರ್ಶಿ ಶಾಫಾನನಿಗೆ, ತನ್ನ ಸೇವಕ ಅಸಾಯನಿಗೆ ರಾಜ ಈ ಆಜ್ಞೆ ಕೊಟ್ಟ: 13 “ಈ ಪುಸ್ತಕದಲ್ಲಿ ಬರೆದಿರೋ ವಿಷ್ಯಗಳನ್ನ ನಮ್ಮ ಪೂರ್ವಜರು ಪಾಲಿಸಲಿಲ್ಲ, ಅದರ ಪ್ರಕಾರ ನಡಿಲಿಲ್ಲ. ಹಾಗಾಗಿ ಯೆಹೋವನಿಗೆ ನಮ್ಮ ಮೇಲೆ ತುಂಬ ಕೋಪ ಬಂದಿದೆ.+ ಹಾಗಾಗಿ ನೀವೆಲ್ಲ ನನ್ನ ಪರವಾಗಿ, ಜನ್ರ ಪರವಾಗಿ, ಇಡೀ ಯೆಹೂದದ ಪರವಾಗಿ ಹೋಗಿ ನಮಗೆ ಸಿಕ್ಕಿರೋ ಈ ಪುಸ್ತಕದಲ್ಲಿ ಬರೆದಿರೋ ಎಲ್ಲ ಮಾತುಗಳ ಬಗ್ಗೆ ಯೆಹೋವನ ಹತ್ರ ಕೇಳು.”
-
-
ಯೆರೆಮೀಯ 39:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಹಾಗಾಗಿ ಕಾವಲುಗಾರರ ಮುಖ್ಯಸ್ಥ ನೆಬೂಜರದಾನ್, ರಬ್ಸಾರೀಸ್‌ನಾದ* ನೆಬೂಷಜ್ಬಾನ್, ರಬ್ಮಾಗ್‌ನಾದ* ನೇರ್ಗಲ್-ಸರೆಚರ್, ಬಾಬೆಲಿನ ರಾಜನ ಎಲ್ಲ ಪ್ರಮುಖ ಗಂಡಸರು ಕೆಲವರನ್ನ ಕಳಿಸಿ 14 ಯೆರೆಮೀಯನನ್ನ ‘ಕಾವಲುಗಾರರ ಅಂಗಳದಿಂದ’ ಹೊರಗೆ ಕರ್ಕೊಂಡು ಬರೋಕೆ ಹೇಳಿದ್ರು.+ ಆಮೇಲೆ ಅವನನ್ನ ಅಹೀಕಾಮನ+ ಮಗ ಶಾಫಾನನ+ ಮೊಮ್ಮಗ ಗೆದಲ್ಯನ+ ಕೈಗೆ ಒಪ್ಪಿಸಿ ಅವನ ಮನೆಗೆ ಕರ್ಕೊಂಡು ಹೋಗೋಕೆ ಹೇಳಿದ್ರು. ಹಾಗಾಗಿ ಯೆರೆಮೀಯ ಜನ್ರ ಜೊತೆ ಇದ್ದ.
-
-
ಯೆರೆಮೀಯ 40:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಯೆರೆಮೀಯ ನೆಬೂಜರದಾನನ ಹತ್ರದಿಂದ ಹೋಗ್ದೆ ಇನ್ನೂ ಅಲ್ಲೇ ನಿಂತಾಗ ನೆಬೂಜರದಾನ ಅವನಿಗೆ “ಅಹೀಕಾಮನ+ ಮಗ ಶಾಫಾನನ+ ಮೊಮ್ಮಗ ಆದ ಗೆದಲ್ಯನ+ ಹತ್ರ ನೀನು ಹೋಗು. ಅವನ ಜೊತೆ ಜನ್ರ ಮಧ್ಯ ವಾಸ ಮಾಡು. ಅವನನ್ನ ಬಾಬೆಲಿನ ರಾಜ ಯೆಹೂದದ ಪಟ್ಟಣಗಳ ಮೇಲೆ ಅಧಿಕಾರಿಯಾಗಿ ಇಟ್ಟಿದ್ದಾನೆ. ಅವನ ಹತ್ರ ಹೋಗೋಕೆ ಇಷ್ಟ ಇಲ್ಲದಿದ್ರೆ ನಿನಗೆ ಎಲ್ಲಿ ಇಷ್ಟನೋ ಅಲ್ಲಿಗೆ ಹೋಗು” ಅಂದ.
ಆಮೇಲೆ ಕಾವಲುಗಾರರ ಮುಖ್ಯಸ್ಥ ಯೆರೆಮೀಯನಿಗೆ ಸ್ವಲ್ಪ ಆಹಾರವನ್ನ, ಒಂದು ಉಡುಗೊರೆಯನ್ನ ಕೊಟ್ಟು ಕಳಿಸಿದ.
-