-
ಧರ್ಮೋಪದೇಶಕಾಂಡ 13:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಆದ್ರೆ ಆ ಪ್ರವಾದಿಯನ್ನ ಅಥವಾ ಕನಸು ನೋಡಿ ಭವಿಷ್ಯ ಹೇಳೋರನ್ನ ಸಾಯಿಸಬೇಕು.+ ಯಾಕಂದ್ರೆ ಈಜಿಪ್ಟಲ್ಲಿ ಗುಲಾಮರಾಗಿದ್ದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನ ವಿರುದ್ಧನೇ ನೀವು ತಿರುಗಿ ಬಿಳೋ ತರ ಅವರು ಮಾಡಿಬಿಡ್ತಾರೆ. ನಿಮ್ಮ ದೇವರಾದ ಯೆಹೋವ ನಿಮಗೆ ಆಜ್ಞೆ ಕೊಟ್ಟ ದಾರಿಯಲ್ಲಿ ನೀವು ನಡಿಯೋದನ್ನ ಬಿಟ್ಟುಬಿಡಬೇಕು ಅಂತ ಹಾಗೆ ಮಾಡ್ತಾರೆ. ನಿಮ್ಮ ಮಧ್ಯದಿಂದ ಕೆಟ್ಟತನ ತೆಗೆದುಹಾಕಬೇಕು.+
-
-
ಧರ್ಮೋಪದೇಶಕಾಂಡ 18:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಒಬ್ಬ ಪ್ರವಾದಿ ನಾನು ಹೇಳದೇ ಇರೋದನ್ನ ದುರಹಂಕಾರದಿಂದ ನನ್ನ ಹೆಸ್ರಲ್ಲಿ ಹೇಳಿದ್ರೆ, ಬೇರೆ ದೇವರುಗಳ ಹೆಸ್ರಲ್ಲಿ ಭವಿಷ್ಯವಾಣಿ ಹೇಳಿದ್ರೆ ಅವನನ್ನ ಸಾಯಿಸಬೇಕು.+
-
-
ಯೆರೆಮೀಯ 29:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ ‘ನಾನು ನೆಹೆಲಾಮಿನ ಶೆಮಾಯನಿಗೆ, ಅವನ ವಂಶದವರಿಗೆ ಶಿಕ್ಷೆ ಕೊಡ್ತೀನಿ. ಅವನ ವಂಶದವರಲ್ಲಿ ಒಬ್ಬ ಕೂಡ ಈ ಜನ್ರ ಮಧ್ಯ ಬದುಕಿ ಉಳಿಯಲ್ಲ. ನಾನು ನನ್ನ ಜನ್ರಿಗೆ ಮಾಡೋ ಒಳ್ಳೇ ವಿಷ್ಯಗಳನ್ನ ಅವನು ನೋಡಲ್ಲ. ಯಾಕಂದ್ರೆ ಯೆಹೋವನ ವಿರುದ್ಧ ತಿರುಗಿ ಬೀಳೋ ತರ ಅವನು ಜನ್ರನ್ನ ಪ್ರಚೋದಿಸಿದ್ದಾನೆ’ ಅಂತಾನೆ ಯೆಹೋವ.”’”
-