-
2 ಪೂರ್ವಕಾಲವೃತ್ತಾಂತ 36:15, 16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಅವ್ರ ಪೂರ್ವಜರ ದೇವರಾದ ಯೆಹೋವ ಸಂದೇಶವಾಹಕರ ಮೂಲಕ ಅವ್ರಿಗೆ ಎಚ್ಚರಿಕೆಯನ್ನ ಕೊಡ್ತಾ ಇದ್ದ. ಆತನಿಗೆ ತನ್ನ ಜನ್ರ ಮೇಲೆ ಮತ್ತು ತನ್ನ ನಿವಾಸದ ಮೇಲೆ ಕನಿಕರ ಇದ್ದಿದ್ರಿಂದ ಆತನು ಅವ್ರನ್ನ ಪದೇಪದೇ ಎಚ್ಚರಿಸಿದ. 16 ಆದರೆ ಅವರು ಸತ್ಯ ದೇವರ ಸಂದೇಶವಾಹಕರನ್ನ ಹೀಯಾಳಿಸ್ತಾ ಇದ್ರು.+ ಅವರು ಆತನ ಮಾತುಗಳನ್ನ ತುಚ್ಛವಾಗಿ ಕಂಡ್ರು.+ ಆತನ ಪ್ರವಾದಿಗಳನ್ನ ಗೇಲಿಮಾಡಿದ್ರು.+ ಯೆಹೋವನ ಕೋಪ ಆತನ ಜನ್ರ ಮೇಲೆ ಬರೋ ತನಕ+ ಸನ್ನಿವೇಶ ಕೈಮೀರಿ ಹೋಗೋ ತನಕ ಅವರು ಹೀಗೇ ಮಾಡಿದ್ರು.
-
-
ನೆಹೆಮೀಯ 9:33ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
33 ನೀನು ನಮಗೆ ಯಾವುದೇ ರೀತಿ ಮೋಸ ಮಾಡಲಿಲ್ಲ. ಕೆಟ್ಟವರಾಗಿ ನಡ್ಕೊಂಡವರು ನಾವೇ.+ ನಮಗೆ ಇಂಥ ಸ್ಥಿತಿ ಬಂದಿರೋದ್ರಲ್ಲಿ ತಪ್ಪೇ ಇಲ್ಲ. ಯಾಕಂದ್ರೆ ನೀನು ನಂಬಿಗಸ್ತನಾಗೇ ನಡ್ಕೊಂಡೆ.
-
-
ದಾನಿಯೇಲ 9:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೆಹೋವನೇ, ನೀನು ಯಾವಾಗ್ಲೂ ಸರಿಯಾದದ್ದನ್ನೇ ಮಾಡ್ತೀಯ. ಆದ್ರೆ ಇವತ್ತಿನ ತನಕ ನಾವು ಅವಮಾನದಿಂದ ಮುಖ ಮುಚ್ಕೊಂಡೇ ಇದ್ದೀವಿ. ಯೆಹೂದದ ಗಂಡಸ್ರು, ಯೆರೂಸಲೇಮ್ ಜನ್ರು, ಹತ್ರದಲ್ಲಿರೋ ದೂರದಲ್ಲಿರೋ ಎಲ್ಲ ಇಸ್ರಾಯೇಲ್ಯರು ನಾಚಿಕೆಪಡೋ ತರ ಆಗಿದೆ. ಅವರು ನಿನಗೆ ನಂಬಿಕೆದ್ರೋಹ ಮಾಡಿದ್ದಿಕ್ಕೆ ನೀನು ಅವ್ರನ್ನ ಎಲ್ಲ ದೇಶಗಳಿಗೂ ಚದರಿಸಿಬಿಟ್ಟೆ.+
-