-
2 ಅರಸು 24:14, 15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ನೆಬೂಕದ್ನೆಚ್ಚರ ಯೆರೂಸಲೇಮಲ್ಲಿದ್ದ ಎಲ್ರನ್ನ, ಎಲ್ಲ ಅಧಿಕಾರಿಗಳನ್ನ,+ ಎಲ್ಲ ವೀರ ಸೈನಿಕರನ್ನ, ಪ್ರತಿಯೊಬ್ಬ ಕರಕುಶಲಗಾರನನ್ನ, ಲೋಹದ ಕೆಲಸಗಾರನನ್ನ*+ ಹೀಗೆ 10,000 ಜನ್ರನ್ನ ಬಂಧಿಸಿ ಕರ್ಕೊಂಡು ಹೋದ. ಅವನು ಬಡ ಜನ್ರನ್ನ ಬಿಟ್ಟು ಬೇರೆ ಎಲ್ರನ್ನೂ ಕರ್ಕೊಂಡು ಹೋದ.+ 15 ಆಮೇಲೆ ಅವನು ಯೆಹೋಯಾಖೀನನ್ನ+ ಬಂಧಿಸಿ ಬಾಬೆಲಿಗೆ ಕರ್ಕೊಂಡು ಹೋದ.+ ಅಷ್ಟೇ ಅಲ್ಲ ರಾಜನ ತಾಯಿ, ಹೆಂಡತಿ, ಆಸ್ಥಾನದ ಅಧಿಕಾರಿ, ದೇಶದ ಪ್ರಮುಖ ವ್ಯಕ್ತಿಗಳನ್ನ ಸಹ ಬಂಧಿಸಿ ಯೆರೂಸಲೇಮಿಂದ ಬಾಬೆಲಿಗೆ ಕರ್ಕೊಂಡು ಹೋದ.
-
-
ಯೆರೆಮೀಯ 39:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಕಾವಲುಗಾರರ ಮುಖ್ಯಸ್ಥನಾದ ನೆಬೂಜರದಾನ+ ಪಟ್ಟಣದಲ್ಲಿ ಉಳಿದಿದ್ದ ಜನ್ರನ್ನ, ಯೆಹೂದ್ಯರ ಪಕ್ಷ ಬಿಟ್ಟು ಕಸ್ದೀಯರ ಜೊತೆ ಸೇರ್ಕೊಂಡಿದ್ದವರನ್ನ, ಉಳಿದ ಬೇರೆಲ್ಲ ಜನ್ರನ್ನ ಬಾಬೆಲಿಗೆ ಕೈದಿಗಳಾಗಿ ಕರ್ಕೊಂಡು ಹೋದ.
-