-
ಯೆಹೆಜ್ಕೇಲ 25:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ವಿಶ್ವದ ರಾಜ ಯೆಹೋವ ಹೀಗಂದನು: ‘ಎದೋಮ್ ಯೆಹೂದದ ಜನ್ರಿಗೆ ಸೇಡು ತೀರಿಸಿದೆ, ಪ್ರತೀಕಾರ ತಗೊಂಡು ದೊಡ್ಡ ಅಪರಾಧವನ್ನ ಮಾಡಿದೆ.+ 13 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಎದೋಮಿನ ವಿರುದ್ಧ ಕೈಚಾಚಿ ಅದ್ರಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡ್ತೀನಿ ಮತ್ತು ಅದು ಹಾಳುಬೀಳೋ ಹಾಗೆ ಮಾಡ್ತೀನಿ.+ ತೇಮಾನಿನಿಂದ ದೆದಾನಿನ ತನಕ ಇರೋ ಜನ್ರೆಲ್ಲ ಕತ್ತಿಯಿಂದ ಸಾಯ್ತಾರೆ.+
-
-
ಯೆಹೆಜ್ಕೇಲ 36:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಅವೆಲ್ಲಕ್ಕೂ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಜನಾಂಗಗಳಲ್ಲಿ ಉಳಿದವ್ರ ವಿರುದ್ಧ ಮತ್ತು ಇಡೀ ಎದೋಮಿನ ವಿರುದ್ಧ ರೋಷಾವೇಶದಿಂದ+ ಮಾತಾಡ್ತೀನಿ. ಯಾಕಂದ್ರೆ ಅವರು ನನ್ನ ದೇಶವನ್ನ ತಮ್ಮದು ಅಂತ ಹೇಳ್ಕೊಂಡು ನನ್ನ ಜನ್ರನ್ನ ಹೀನಾಯವಾಗಿ ಅವಮಾನ ಮಾಡ್ತಾ ಖುಷಿಪಡ್ತಿದ್ದಾರೆ.+ ಅದ್ರಲ್ಲಿರೋ ಹುಲ್ಲುಗಾವಲುಗಳನ್ನ ವಶ ಮಾಡ್ಕೊಳ್ಳೋಕೆ ಮತ್ತು ದೇಶದಲ್ಲಿ ಇರೋದನ್ನೆಲ್ಲ ಕೊಳ್ಳೆ ಹೊಡೆಯೋಕೆ ಅವರು ಹೀಗೆ ಮಾಡ್ತಿದ್ದಾರೆ.’”’+
-