-
ಆದಿಕಾಂಡ 32:24-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಕೊನೆಗೆ ಯಾಕೋಬ ಒಬ್ಬನೇ ಇದ್ದ. ಆಗ ಒಬ್ಬ ಪುರುಷ* ಅವನ ಜೊತೆ ಬೆಳಗಾಗೋ ತನಕ ಕುಸ್ತಿಮಾಡಿದ.+ 25 ಆ ಪುರುಷನಿಗೆ ತನ್ನಿಂದ ಅವನನ್ನ ಸೋಲಿಸೋಕೆ ಆಗ್ತಿಲ್ಲ ಅಂತ ಗೊತ್ತಾದಾಗ ಅವನ ತೊಡೆಯ ಸಂದನ್ನ* ಮುಟ್ಟಿದ. ಹಾಗಾಗಿ ಕುಸ್ತಿ ಮಾಡ್ತಾ ಇದ್ದಾಗ್ಲೇ ಯಾಕೋಬನ ತೊಡೆಯ ಸಂದು ತಪ್ಪಿತು.+ 26 ಆಮೇಲೆ ಆ ಪುರುಷ “ಬೆಳಗಾಗ್ತಾ ಇದೆ, ನನ್ನನ್ನ ಬಿಡು” ಅಂದ. ಅದಕ್ಕೆ ಯಾಕೋಬ “ಇಲ್ಲ, ನೀನು ನನ್ನನ್ನ ಆಶೀರ್ವದಿಸೋ ತನಕ ಬಿಡೋದಿಲ್ಲ”+ ಅಂದ.
-