3 ಯೇಸು ಅವನನ್ನ ಮುಟ್ಟಿ “ನಿನ್ನನ್ನ ವಾಸಿಮಾಡೋಕೆ ನಂಗೆ ಇಷ್ಟ ಇದೆ”+ ಅಂದನು. ತಕ್ಷಣ ಅವನ ಕುಷ್ಠ ವಾಸಿ ಆಯ್ತು.+ 4 ಆಮೇಲೆ ಯೇಸು “ನೋಡು, ಇದನ್ನ ಯಾರಿಗೂ ಹೇಳಬೇಡ.+ ಆದ್ರೆ ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸು.+ ಮೋಶೆಯ ನಿಯಮದಲ್ಲಿ ಹೇಳಿರೋ ಹಾಗೆ+ ಉಡುಗೊರೆ ಅರ್ಪಿಸು. ಇದು ಅವ್ರಿಗೆ ಸಾಕ್ಷಿಯಾಗಿರಲಿ” ಅಂದನು.