12 ತನ್ನ ಜನ್ರ ಪರವಾಗಿ ನಿಂತಿರೋ ಮಹಾ ಸೇನಾಪತಿಯಾದ+ ಮೀಕಾಯೇಲ+ ಆ ಸಮಯದಲ್ಲಿ ಕ್ರಮ ತಗೊಳ್ತಾನೆ. ಆಗ ಎಂಥ ಕಷ್ಟಕಾಲ ಬರುತ್ತೆ ಅಂದ್ರೆ ಭೂಮಿ ಮೇಲೆ ಮೊದಲ ದೇಶ ಹುಟ್ಕೊಂಡ ದಿನದಿಂದ ಅವತ್ತಿನ ತನಕ ಅಂಥ ಕಷ್ಟಕಾಲ ಬಂದಿಲ್ಲ. ಆ ಸಮಯದಲ್ಲಿ ನಿನ್ನ ಜನ್ರಲ್ಲಿ ಯಾರ ಹೆಸ್ರು ಗ್ರಂಥದಲ್ಲಿ ಬರೆದಿರುತ್ತೊ+ ಅವ್ರೆಲ್ಲ ತಪ್ಪಿಸ್ಕೊಳ್ತಾರೆ.+