-
ಮಾರ್ಕ 14:17-21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಸಂಜೆ ಆದಾಗ ಯೇಸು 12 ಶಿಷ್ಯರ ಜೊತೆ ಅಲ್ಲಿ ಬಂದನು.+ 18 ಅವರು ಮೇಜಿನ ಹತ್ರ ಕೂತು ಊಟ ಮಾಡ್ತಿರುವಾಗ ಯೇಸು ಅವ್ರಿಗೆ “ನಿಮಗೆ ನಿಜ ಹೇಳ್ತೀನಿ, ನನ್ನ ಜೊತೆ ಊಟ ಮಾಡ್ತಿರೋ ನಿಮ್ಮಲ್ಲೇ ಒಬ್ಬ ನನಗೆ ಮೋಸ ಮಾಡ್ತಾನೆ” ಅಂದನು.+ 19 ಅದನ್ನ ಕೇಳಿ ಶಿಷ್ಯರಿಗೆ ತುಂಬ ದುಃಖ ಆಯ್ತು. “ಅದು ನಾನಲ್ಲ ತಾನೇ?” ಅಂತ ಒಬ್ಬರಾದ ಮೇಲೆ ಒಬ್ಬರು ಯೇಸುನ ಕೇಳೋಕೆ ಶುರುಮಾಡಿದ್ರು. 20 ಆಗ ಯೇಸು “ಇಲ್ಲಿರೋ 12 ಜನ್ರಲ್ಲಿ ಒಬ್ಬ ಅಂದ್ರೆ ನನ್ನ ಜೊತೆ ಬಟ್ಟಲಲ್ಲಿ ರೊಟ್ಟಿ ಅದ್ದಿ ತಿಂತಿರೋ ವ್ಯಕ್ತಿನೇ ಅವನು.+ 21 ಪವಿತ್ರ ಗ್ರಂಥದಲ್ಲಿ ಹೇಳಿರೋ ಪ್ರಕಾರ ಮನುಷ್ಯಕುಮಾರ ಸತ್ತುಹೋಗ್ತಾನೆ ನಿಜ. ಆದ್ರೆ ಮನುಷ್ಯಕುಮಾರನಿಗೆ ಮೋಸ ಮಾಡೋ ಆ ವ್ಯಕ್ತಿಗೆ ಆಗೋ ಗತಿಯನ್ನ ಏನು ಹೇಳಲಿ!+ ಅವನು ಹುಟ್ಟದೇ ಇದ್ದಿದ್ರೆ ಚೆನ್ನಾಗಿರ್ತಿತ್ತು” ಅಂದನು.+
-