21 ಆದ್ರೆ ನೋಡಿ! ನನಗೆ ಮೋಸ ಮಾಡೋನು ನನ್ನ ಜೊತೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡ್ತಾ ಇದ್ದಾನೆ.+22 ಪವಿತ್ರ ಗ್ರಂಥದಲ್ಲಿ ಬರೆದಿರೋ ತರಾನೇ ಮನುಷ್ಯಕುಮಾರ ಸತ್ತುಹೋಗ್ತಾನೆ.+ ಆದ್ರೆ ಅವನಿಗೆ ಮೋಸ ಮಾಡೋ ವ್ಯಕ್ತಿಗೆ ಆಗೋ ಗತಿ ಏನು ಹೇಳಲಿ!” ಅಂದನು.+23 ಆಗ ಶಿಷ್ಯರು ಯಾರು ಆ ತರ ಮಾಡ್ತಾರೆ ಅಂತ ಮಾತಾಡ್ಕೊಳ್ಳೋಕೆ ಶುರುಮಾಡಿದ್ರು.+
21 ಇದನ್ನ ಹೇಳಿದ ಮೇಲೆ ಯೇಸುಗೆ ಒಳಗೊಳಗೆ ತುಂಬ ದುಃಖ ಆಯ್ತು. ಹಾಗಾಗಿ ಯೇಸು “ನಿಜ ಹೇಳ್ತೀನಿ, ನಿಮ್ಮಲ್ಲಿ ಒಬ್ಬ ನನಗೆ ನಂಬಿಕೆ ದ್ರೋಹ ಮಾಡ್ತಾನೆ” ಅಂದನು.+22 ಅವನ್ಯಾರು ಅಂತ ಅರ್ಥ ಆಗದೆ ಶಿಷ್ಯರು ಮುಖಮುಖ ನೋಡ್ಕೊಂಡ್ರು.+