-
1 ಕೊರಿಂಥ 11:23-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಪ್ರಭು ನನಗೆ ಏನು ಕಲಿಸಿದನೋ ಅದನ್ನ ನಾನು ನಿಮಗೆ ಕಲಿಸಿದ್ದೀನಿ. ಪ್ರಭುವಾದ ಯೇಸುಗೆ ದ್ರೋಹ ಆದ ಆ ರಾತ್ರಿ+ ಆತನು ರೊಟ್ಟಿ ತಗೊಂಡು 24 ದೇವರಿಗೆ ಧನ್ಯವಾದ ಹೇಳಿದನು. ಆಮೇಲೆ ಅದನ್ನ ಮುರಿದು ಶಿಷ್ಯರಿಗೆ “ಇದು ನಿಮಗೋಸ್ಕರ ನಾನು ಅರ್ಪಿಸೋ ನನ್ನ ದೇಹವನ್ನ ಸೂಚಿಸುತ್ತೆ.+ ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ”+ ಅಂತ ಹೇಳಿದನು. 25 ಪಸ್ಕದ ಊಟ ಮಾಡಿದ ಮೇಲೆ ಆತನು ದ್ರಾಕ್ಷಾಮದ್ಯ ಇದ್ದ ಬಟ್ಟಲು ತಗೊಂಡು+ ಅದೇ ರೀತಿ ಮಾಡಿ ಶಿಷ್ಯರಿಗೆ “ಈ ಬಟ್ಟಲು ಹೊಸ ಒಪ್ಪಂದವನ್ನ ಸೂಚಿಸುತ್ತೆ.+ ನಾನು ಸುರಿಸೋ ರಕ್ತಾನೇ ಇದಕ್ಕೆ ಆಧಾರ.+ ಇದನ್ನ ಕುಡಿವಾಗೆಲ್ಲ ನನ್ನನ್ನ ನೆನಪಿಸ್ಕೊಳ್ಳೋಕೆ ಹೀಗೆ ಮಾಡಿ”+ ಅಂತ ಹೇಳಿದನು. 26 ನೀವು ಈ ರೊಟ್ಟಿ ತಿಂದು ಈ ದ್ರಾಕ್ಷಾಮದ್ಯ ಕುಡಿವಾಗೆಲ್ಲ ಪ್ರಭು ಸಾವಿನ ಬಗ್ಗೆ ಆತನು ಬರೋ ತನಕ ಹೇಳ್ತಾ ಇರ್ತಿರ.
-