27 ಯೇಸು ಅವ್ರಿಗೆ “ನೀವೆಲ್ಲ ನನ್ನನ್ನ ಬಿಟ್ಟು ಓಡಿಹೋಗ್ತೀರ.* ಯಾಕಂದ್ರೆ ಪವಿತ್ರ ಗ್ರಂಥದಲ್ಲಿ ‘ನಾನು ಕುರುಬನ ಮೇಲೆ ಆಕ್ರಮಣ ಮಾಡ್ತೀನಿ.+ ಕುರಿಗಳು ಚೆದರಿಹೋಗ್ತವೆ’ ಅಂತ ಬರೆದಿದೆ.+28 ಆದ್ರೆ ನಾನು ಸತ್ತ ಮೇಲೆ ದೇವರು ನನ್ನನ್ನ ಜೀವಂತ ಎಬ್ಬಿಸ್ತಾನೆ. ಆಮೇಲೆ ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗ್ತೀನಿ” ಅಂದನು.+
32 ನೋಡಿ, ಒಂದು ಸಮಯ ಬರುತ್ತೆ, ಆ ಸಮಯ ಈಗಾಗಲೇ ಬಂದಿದೆ. ನೀವೆಲ್ಲ ನನ್ನನ್ನ ಬಿಟ್ಟು ನಿಮ್ಮನಿಮ್ಮ ಮನೆಗೆ ಓಡಿಹೋಗ್ತೀರ.+ ಆದ್ರೆ ನಾನು ಒಂಟಿ ಅಲ್ಲ. ನನ್ನ ಜೊತೆ ನನ್ನ ಅಪ್ಪ ಇದ್ದಾನೆ.+