-
ಮಾರ್ಕ 14:37-42ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ಆತನು ಶಿಷ್ಯರ ಹತ್ರ ಬಂದಾಗ ಅವರು ನಿದ್ದೆ ಮಾಡ್ತಿದ್ರು. ಪೇತ್ರನಿಗೆ “ಸೀಮೋನ, ನಿದ್ದೆ ಮಾಡ್ತಾ ಇದ್ಯಾ? ನನ್ನ ಜೊತೆ ಸ್ವಲ್ಪ ಹೊತ್ತು ಎಚ್ಚರ ಇರೋಕೂ ಶಕ್ತಿ ಇಲ್ವಾ?+ 38 ನೀವು ಪಾಪ ಮಾಡದೆ ಇರಬೇಕಂದ್ರೆ ಎಚ್ಚರವಾಗಿದ್ದು, ಪ್ರಾರ್ಥನೆ ಮಾಡ್ತಾ ಇರಬೇಕು.+ ನಿಮಗೇನೋ ಮನಸ್ಸಿದೆ, ಆದ್ರೆ ದೇಹಕ್ಕೆ ಶಕ್ತಿ ಇಲ್ಲ” ಅಂದನು.+ 39 ಆತನು ಮತ್ತೆ ಹೋಗಿ ಅದೇ ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಿದನು.+ 40 ವಾಪಸ್ ಬಂದು ನೋಡಿದಾಗ ಅವರು ನಿದ್ದೆ ಮಾಡ್ತಿದ್ರು. ಯಾಕಂದ್ರೆ ಅವ್ರಿಗೆ ನಿದ್ದೆ ತಡ್ಕೊಳ್ಳೋಕೆ ಆಗಲಿಲ್ಲ. ಹಾಗಾಗಿ ಆತನಿಗೆ ಏನು ಹೇಳೋದು ಅಂತ ಅವ್ರಿಗೆ ತೋಚಲಿಲ್ಲ. 41 ಆತನು ಮೂರನೇ ಸಲ ಅವ್ರ ಹತ್ರ ಬಂದು “ಇಂಥ ಸಮಯದಲ್ಲಿ ನಿದ್ದೆ ಮಾಡಿ ವಿಶ್ರಾಂತಿ ತಗೊಳ್ತಾ ಇದ್ದೀರಾ? ನಿದ್ದೆ ಮಾಡಿದ್ದು ಸಾಕು! ನೋಡಿ, ಸಮಯ ಬಂದೇ ಬಿಡ್ತು!+ ಮನುಷ್ಯಕುಮಾರನಿಗೆ ಮೋಸ ಮಾಡಿ ಪಾಪಿಗಳ ಕೈಗೆ ಹಿಡಿದುಕೊಡ್ತಾರೆ. 42 ಎದ್ದೇಳಿ ಹೋಗೋಣ. ನನಗೆ ಮೋಸ ಮಾಡುವವನು ಹತ್ರ ಬಂದಿದ್ದಾನೆ” ಅಂದನು.+
-