-
ಮಾರ್ಕ 14:66-72ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
66 ಪೇತ್ರ ಕೆಳಗೆ ಅಂಗಳದಲ್ಲಿ ಇದ್ದಾಗ ಮಹಾ ಪುರೋಹಿತನ ಒಬ್ಬ ಸೇವಕಿ ಬಂದಳು.+ 67 ಪೇತ್ರ ಚಳಿಕಾಯಿಸ್ತಾ ಇದ್ದಾಗ ಅವಳು ಅವನನ್ನ ಗುರಾಯಿಸಿ ನೋಡಿ “ನೀನೂ ಆ ನಜರೇತಿನ ಯೇಸು ಜೊತೆ ಇದ್ದೆ ತಾನೇ?” ಅಂದಳು. 68 ಆದ್ರೆ ಅವನು ಒಪ್ಪದೆ “ಅವನು ಯಾರಂತಾನೇ ನಂಗೊತ್ತಿಲ್ಲ, ನೀನು ಏನು ಮಾತಾಡ್ತಾ ಇದ್ದೀಯ ಅಂತಾನೂ ನನಗೆ ಅರ್ಥ ಆಗ್ತಿಲ್ಲ” ಅಂತ ಹೇಳಿ ಅಲ್ಲಿಂದ ಹೊರಗೆ ಬಂದ. 69 ಇನ್ನೊಂದು ಸಲ ಆ ಸೇವಕಿ ಅವನನ್ನ ನೋಡಿ ಅಲ್ಲಿ ಹತ್ರ ನಿಂತಿದ್ದವ್ರಿಗೆ “ಇವನೂ ಅವ್ರ ಜೊತೆ ಇದ್ದ” ಅಂತ ಹೇಳೋಕೆ ಶುರುಮಾಡಿದಳು. 70 ಆಗ್ಲೂ ಪೇತ್ರ ಒಪ್ಪಲಿಲ್ಲ. ಸ್ವಲ್ಪ ಸಮಯ ಆದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ “ನಿಜ ಹೇಳು, ನೀನೂ ಅವ್ರಲ್ಲಿ ಒಬ್ಬ ತಾನೇ. ಯಾಕಂದ್ರೆ ನೀನೂ ಗಲಿಲಾಯದವನು” ಅಂದ್ರು. 71 ಅವನು ಆಣೆಯಿಟ್ಟು “ನಾನು ನಿಜ ಹೇಳ್ತಿಲ್ಲಾಂದ್ರೆ ನನ್ನ ಮೇಲೆ ಶಾಪ ಬರಲಿ. ನೀವು ಯಾರ ಬಗ್ಗೆ ಮಾತಾಡ್ತಾ ಇದ್ದೀರಾ? ಅವನು ಯಾರಂತ ನಿಜವಾಗ್ಲೂ ನಂಗೊತ್ತಿಲ್ಲ!” ಅಂದ. 72 ಸರಿಯಾಗಿ ಅದೇ ಸಮಯಕ್ಕೆ ಕೋಳಿ ಎರಡನೇ ಸಲ ಕೂಗ್ತು.+ ಆಗ ಪೇತ್ರ “ಕೋಳಿ ಎರಡು ಸಾರಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ”+ ಅಂತ ಯೇಸು ಹೇಳಿದ್ದನ್ನ ನೆನಪಿಸ್ಕೊಂಡು ಹೊರಗೆ ಹೋಗಿ ಜೋರಾಗಿ ಅತ್ತುಬಿಟ್ಟ.
-
-
ಲೂಕ 22:54-62ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
54 ಆಮೇಲೆ ಯೇಸುವನ್ನ ಬಂಧಿಸಿ+ ಮಹಾ ಪುರೋಹಿತನ ಮನೆಗೆ ಕರ್ಕೊಂಡು ಹೋದ್ರು. ಪೇತ್ರ ಸ್ವಲ್ಪ ದೂರದಲ್ಲಿ ಅವ್ರ ಹಿಂದೆ-ಹಿಂದೆನೇ ಹೋಗ್ತಿದ್ದ.+ 55 ಮನೆ ಅಂಗಳದ ಮಧ್ಯದಲ್ಲಿ ಜನ ಬೆಂಕಿ ಹೊತ್ತಿಸಿ ಚಳಿಕಾಯಿಸ್ತಾ ಇದ್ರು. ಪೇತ್ರ ಅವ್ರ ಜೊತೆ ಕೂತ.+ 56 ಆ ಬೆಂಕಿಯ ಬೆಳಕಲ್ಲಿ ಪೇತ್ರನ ಮುಖ ನೋಡಿ ಒಬ್ಬ ಸೇವಕಿ “ಇವನು ಕೂಡ ಅವನ ಜೊತೆ ಇದ್ದ” ಅಂದಳು. 57 ಆದ್ರೆ ಪೇತ್ರ ಅದನ್ನ ಒಪ್ಪದೆ “ಇಲ್ಲ, ಅವನು ಯಾರಂತ ನಂಗೊತ್ತಿಲ್ಲ” ಅಂದುಬಿಟ್ಟ. 58 ಸ್ವಲ್ಪ ಸಮಯ ಆದಮೇಲೆ ಇನ್ನೊಬ್ಬ ಪೇತ್ರನನ್ನ ನೋಡಿ “ನೀನೂ ಅವ್ರ ಜೊತೆ ಇದ್ದೆ” ಅಂತ ಹೇಳಿದಾಗ ಪೇತ್ರ “ಇಲ್ಲಪ್ಪ, ಅದು ನಾನಲ್ಲ” ಅಂದ.+ 59 ಇದಾಗಿ ಸುಮಾರು ಒಂದು ತಾಸು ಆಗಿತ್ತು, ಮತ್ತೊಬ್ಬ ಬಂದು “ನನಗೆ ಚೆನ್ನಾಗಿ ಗೊತ್ತು, ಇವನೂ ಆ ಯೇಸು ಜೊತೆ ಇದ್ದ. ಯಾಕಂದ್ರೆ ಇವನೂ ಗಲಿಲಾಯದವನು” ಅಂತ ಹೇಳ್ತಾನೇ ಇದ್ದ. 60 ಅದಕ್ಕೆ ಪೇತ್ರ “ನೀನೇನು ಹೇಳ್ತಿದ್ದೀಯಾ? ನನಗೇನೂ ಅರ್ಥ ಆಗ್ತಿಲ್ಲ” ಅಂದ. ಈ ಮಾತು ಹೇಳ್ತಾ ಇದ್ದಾಗಲೇ ಕೋಳಿ ಕೂಗಿತು. 61 ಆಗ ಒಡೆಯ ತಿರುಗಿ ಪೇತ್ರನನ್ನ ನೋಡಿದನು. “ಇವತ್ತು ಕೋಳಿ ಕೂಗೋ ಮುಂಚೆ ನೀನು ಮೂರು ಸಲ ನಾನು ಯಾರಂತಾನೇ ಗೊತ್ತಿಲ್ಲ ಅಂತ ಹೇಳ್ತೀಯ” ಅಂತ ಒಡೆಯ ಹೇಳಿದ್ದು ಪೇತ್ರನಿಗೆ ನೆನಪಾಯ್ತು.+ 62 ಅವನು ಹೊರಗೆ ಹೋಗಿ ದುಃಖಪಡ್ತಾ ಬಿಕ್ಕಿಬಿಕ್ಕಿ ಅತ್ತ.
-
-
ಯೋಹಾನ 18:15-17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಸೀಮೋನ ಪೇತ್ರ ಮತ್ತು ಇನ್ನೊಬ್ಬ ಶಿಷ್ಯ ಯೇಸುವಿನ ಹಿಂದೆನೇ ಹೋದ್ರು.+ ಆ ಶಿಷ್ಯನಿಗೆ ಮಹಾ ಪುರೋಹಿತನ ಪರಿಚಯ ಇತ್ತು. ಹಾಗಾಗಿ ಅವನು ಯೇಸು ಜೊತೆ ಮಹಾ ಪುರೋಹಿತನ ಮನೆ ಅಂಗಳದ ಒಳಗೆ ಹೋದ. 16 ಆದ್ರೆ ಪೇತ್ರ ಬಾಗಿಲ ಹತ್ರ ನಿಂತಿದ್ದ. ಆಗ ಮಹಾ ಪುರೋಹಿತನ ಪರಿಚಯ ಇದ್ದ ಆ ಇನ್ನೊಬ್ಬ ಶಿಷ್ಯ ಹೊರಗೆ ಹೋದ. ಬಾಗಿಲು ಕಾಯೋ ಸೇವಕಿ ಹತ್ರ ಮಾತಾಡಿ ಪೇತ್ರನನ್ನ ಒಳಗೆ ಕರ್ಕೊಂಡು ಬಂದ. 17 ಆಗ ಬಾಗಿಲು ಕಾಯೋ ಸೇವಕಿ ಪೇತ್ರನಿಗೆ “ನೀನೂ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ವಾ?” ಅಂತ ಕೇಳಿದಳು. ಅದಕ್ಕೆ ಪೇತ್ರ “ಇಲ್ಲ” ಅಂದ.+
-