ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 17:14-17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಅವರು ಜನ್ರ ಹತ್ರ ಹೋದಾಗ+ ಒಬ್ಬ ಮನುಷ್ಯ ಯೇಸುವಿಗೆ ಮೊಣಕಾಲೂರಿ 15 “ಸ್ವಾಮಿ, ನನ್ನ ಮಗನಿಗೆ ಕರುಣೆ ತೋರಿಸು. ಅವನಿಗೆ ಹುಷಾರಿಲ್ಲ, ಮೂರ್ಛೆರೋಗ ಇದೆ. ಅವನು ಆಗಾಗ ಬೆಂಕಿಯಲ್ಲಿ, ನೀರಲ್ಲಿ ಬೀಳ್ತಾನೆ.+ 16 ಅವನನ್ನ ನಿನ್ನ ಶಿಷ್ಯರ ಹತ್ರ ಕರ್ಕೊಂಡು ಬಂದೆ. ಆದ್ರೆ ಅವ್ರಿಗೆ ವಾಸಿಮಾಡೋಕೆ ಆಗ್ಲಿಲ್ಲ” ಅಂದ. 17 ಅದಕ್ಕೆ ಯೇಸು “ನಂಬಿಕೆ ಇಲ್ಲದವ್ರೇ, ಪಾಪಿಗಳೇ,+ ನಾನಿನ್ನೂ ಎಷ್ಟು ಸಮಯ ನಿಮ್ಮ ಜೊತೆ ಇರ್ಬೇಕು? ಎಷ್ಟು ದಿನ ಅಂತ ನಿಮ್ಮನ್ನ ಸಹಿಸ್ಕೋಬೇಕು? ಅವನನ್ನ ಕರ್ಕೊಂಡು ಬನ್ನಿ” ಅಂದನು.

  • ಲೂಕ 9:38-42
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 38 ಅವ್ರಲ್ಲಿ ಒಬ್ಬ “ಗುರು, ದಯವಿಟ್ಟು ಬಂದು ನನ್ನ ಮಗನನ್ನ ನೋಡು. ನನಗಿರೋದು ಒಬ್ಬನೇ ಮಗ.+ 39 ಅವನು ಒಬ್ಬ ಕೆಟ್ಟ ದೇವದೂತನ ಹತೋಟಿಯಲ್ಲಿದ್ದಾನೆ. ಆ ಕೆಟ್ಟ ದೇವದೂತ ಮೈಯಲ್ಲಿ ಬಂದ ತಕ್ಷಣ ಅವನು ಕೂಗ್ತಾನೆ, ನೆಲಕ್ಕೆ ಬಿದ್ದು ಒದ್ದಾಡ್ತಾನೆ, ಬಾಯಲ್ಲಿ ನೊರೆ ಬರುತ್ತೆ. ಹೀಗೆ ತುಂಬ ಕಷ್ಟ ಕೊಟ್ಟ ಮೇಲೆ ಆ ಕೆಟ್ಟ ದೇವದೂತ ಬಿಟ್ಟುಬಿಡ್ತಾನೆ. 40 ಆ ಕೆಟ್ಟ ದೇವದೂತನಿಂದ ನನ್ನ ಮಗನನ್ನ ಬಿಡಿಸೋಕೆ ನಿನ್ನ ಶಿಷ್ಯರ ಹತ್ರ ಕರ್ಕೊಂಡು ಬಂದೆ. ಆದ್ರೆ ವಾಸಿಮಾಡೋಕೆ ಅವ್ರಿಂದ ಆಗ್ಲಿಲ್ಲ” ಅಂದ. 41 ಅದಕ್ಕೆ ಯೇಸು “ನಂಬಿಕೆ ಇಲ್ಲದವ್ರೇ, ಪಾಪಿಗಳೇ,+ ನಾನಿನ್ನೂ ಎಷ್ಟು ಸಮಯ ನಿಮ್ಮ ಜೊತೆ ಇರಬೇಕು? ಎಷ್ಟು ದಿನ ಅಂತ ನಿಮ್ಮನ್ನ ಸಹಿಸ್ಕೊಬೇಕು? ನಿನ್ನ ಮಗನನ್ನ ಕರ್ಕೊಂಡು ಬಾ”+ ಅಂದನು. 42 ಅವನು ಹತ್ರ ಬರ್ತಿರೋವಾಗ ಆ ಕೆಟ್ಟ ದೇವದೂತ ಹುಡುಗನನ್ನ ನೆಲಕ್ಕೆ ಬೀಳಿಸಿ, ಒದ್ದಾಡಿಸಿ, ಹಿಂಸೆ ಮಾಡಿದ. ಆದ್ರೆ ಯೇಸು ಆ ಕೆಟ್ಟ ದೇವದೂತನನ್ನ ಗದರಿಸಿ, ಆ ಹುಡುಗನನ್ನ ವಾಸಿ ಮಾಡಿ ಅವನ ತಂದೆಗೆ ಒಪ್ಪಿಸಿದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ